Showing posts with label ಆನಂದಮಯಗೆ ಚಿನ್ಮಯಗೆ ಶ್ರೀಮನ್ನಾರಾಯಣಗೆ ಆರತಿ hayavadana AANANDAMAYAGE CHINMAYAGE SRIMANNARAYANAGE ARATI. Show all posts
Showing posts with label ಆನಂದಮಯಗೆ ಚಿನ್ಮಯಗೆ ಶ್ರೀಮನ್ನಾರಾಯಣಗೆ ಆರತಿ hayavadana AANANDAMAYAGE CHINMAYAGE SRIMANNARAYANAGE ARATI. Show all posts

Monday, 6 September 2021

ಆನಂದಮಯಗೆ ಚಿನ್ಮಯಗೆ ಶ್ರೀಮನ್ನಾರಾಯಣಗೆ ಆರತಿ ankita hayavadana AANANDAMAYAGE CHINMAYAGE SRIMANNARAYANAGE ARATI




ಆನಂದಮಯಗೆ ಚಿನ್ಮಯಗೆ
ಶ್ರೀಮನ್ನಾರಾಯಣಗೆ ಆರತಿ ಎತ್ತಿರೆ||

ವೇದವ ತಂದು ಬೆಟ್ಟವ ಪೊತ್ತು ಧರಣೀಯ
ಸಾಧಿಸಿ ಕಂಭದೊಳುದಿಸಿದಗೆ|
ಭೂದಾನವ ಬೇಡಿ ನೃಪರ ಸಂಹರಿಸಿದ
ಆದಿ ಮೂರುತಿಗೆ ಆರತಿ ಎತ್ತಿರೆ||

ಇಂದುವದನೆ ಸೀತೆ ಸಹಿತಲರಣ್ಯದಿ
ನಂದಗೋಕುಲದಲ್ಲಿ ನಲಿದವಗೆ|
ಮಂದಗಮನೆಯರ ಮುಂದೆ ನಿರ್ವಾಣದಿ
ನಿಂದ ಮೂರುತಿಗೆ ಆರತಿ ಎತ್ತಿರೆ||

ತುರಗವನೇರಿ ದೈತ್ಯರ ಸೀಳಿ ಸುಜನರ
ಪೊರೆವ ಮಂಗಳ ಹಯವದನನಿಗೆ|
ವರದ ಯಾದವಗಿರಿ ಆದಿ ನಾರಾಯಣ
ಚರಣ ಕಮಲಕೆ ಆರತಿ ಎತ್ತಿರೆ||
***

aanandamayage chinmayage |
shreemannaaraayanage aarati ettire || pa ||

vedava tandu bettava pottu dharaniya |
saadhisi kambadol udisidavage |
bhoodaanava bedi nrupara samharisida |
aadi moorutige aarati ettire || 1 ||


induvadane seete sahitalaranyadi |
nandagokuladolu beledavage |
mandagamaneyara munde nirvaanadi |
ninta moorutige aarati ettire || 2 ||

turagavaneri daityara seeli bhaktara |
poreda mangala hayavadananige |
vara velaapura chennigaraayana |
charanakamalake aarati ettire || 3 ||
***


ಆನಂದಮಯಗೆ ಚಿನ್ಮಯಗೆ ಶ್ರೀಮನ್ನಾರಾಯಣಗೆ ಆರತಿ ಎತ್ತಿರೆ|| 
ವೇದವ ತಂದು ಬೆಟ್ಟವ ಪೊತ್ತು ಧರಣಿಯ ಸಾಧಿಸಿ ಕಂಭದಿ ಬಂದವಗೆ|

ಭೂದಾನವ ಬೇಡಿ ನೃಪರ ಸಂಹರಿಸಿದ ಆದಿಮೂರುತಿಗೆ ಆರತಿ ಎತ್ತಿರೆ||

ಇಂದುವದನೆ ಕೂಡಿ ಅಡವಿಯ ಚರಿಸಿ ನಂದಗೋಕುಲದಿ ನಲಿದವಗೆ|
ಮಂದಗಮನೆಯರ ಮುಂದೆ ನಿರ್ವಾಣದಿ ನಿಂದ ಮೂರುತಿಗೆ ಆರತಿ ಎತ್ತಿರೆ|| 

ತುರಗವನೇರಿ ದೈತ್ಯರ ಸೀಳಿ ಸುಜನರ ಪೊರೆವ ಮಂಗಳ ಹಯವದನನಿಗೆ| ವರದ ಯಾದವಗಿರಿ ಆದಿ ನಾರಾಯಣ ಚರಣ ಕಮಲಕೆ ಆರತಿ ಎತ್ತಿರೆ||
***

ಆನಂದಮಯಗೆ ಚಿನ್ಮಯಗೆ ಆ-
ದಿನಾರಾಯಣಗಾರತಿ ಎತ್ತಿರೆ ||

ವೇದವ ತಂದು ಬೆಟ್ಟವ ಪೊತ್ತು ಧರಣಿಯ
ಸಾಧಿಸಿ ಕಂಬದಿ ಬಂದವಗೆ
ಭೂದಾನವ ಬೇಡಿ ನೃಪರ ಸಂಹರಿಸಿದ
ಆದಿಮೂರುತಿಗಾರತಿ ಎತ್ತಿರೆ ||1||

ಇಂದುವದನೆ ಸಹಿತ ಅರಣ್ಯದೊಳಗಾಡಿ
ನಂದಗೋಕುಲದಲ್ಲಿ ನಲಿದವಗೆ
ಮಂದಗಮನೆಯರ ಮುಂದೆ ನಿರ್ವಾಣದಿ
ನಿಂದ ಮೂರುತಿಗಾರತಿ ಎತ್ತಿರೆ ||2||

ತುರಗವನೇರಿ ದುಷ್ಟರ ಸೀಳಿ ಭಕ್ತರ
ಪೊರೆವ ಮಂಗಳ ಹಯವದನನಿಗೆ
ವರದ ಯಾದವಗಿರಿ ಚೆಲುವನಾರಾಯಣನ
ಚರಣಕಮಲಕಾರತಿ ಎತ್ತಿರೆ ||3||
***