Showing posts with label ಆದಿನಾಥಗೆ ಜಯಮಂಗಳ ಶ್ರೀಧರ ಮೂರ್ತಿಗೆ ಶುಭಮಂಗಳ prasannavenkata. Show all posts
Showing posts with label ಆದಿನಾಥಗೆ ಜಯಮಂಗಳ ಶ್ರೀಧರ ಮೂರ್ತಿಗೆ ಶುಭಮಂಗಳ prasannavenkata. Show all posts

Monday, 18 November 2019

ಆದಿನಾಥಗೆ ಜಯಮಂಗಳ ಶ್ರೀಧರ ಮೂರ್ತಿಗೆ ಶುಭಮಂಗಳ ankita prasannavenkata

ಆದಿನಾಥಗೆ ಜಯಮಂಗಳ
ಶ್ರೀಧರ ಮೂರ್ತಿಗೆ ಶುಭಮಂಗಳ ಪ.

ಧರಿಸಿ ನಾವೆಯ ಸತ್ಯವ್ರತನ 
ಪಾವನ ಮಾಡಿಚರಿಸದೆ ಮಂದರಗಿರಿಯ 
ಹೊತ್ತುಧರೆಯ ನೆಗಹಿ ಬಂಗಾರಗಣ್ಣಿನವನ
ಹರಿದು ದೈತ್ಯಜಗೊಲಿದು ಬಂದವಗೆ 1

ಸುರಪನಂತಸ್ತಾಪ ತರಿದು 
ಧರಿತ್ರಿಯಸುರರಿಗೆ ಸಕಲ ಪದವಿಯನಿತ್ತು
ಶರಧಿಯ ದಾಟಿ ದಶಶಿರನ ತಲೆ ಚಿವುಟಿ
ತುರುಗಾಯ್ದ ಗೋಪೇರ ಅರಸನಿಗೆ 2

ಅಂತರಾಳ ಪಟ್ಟಣಕಪಾಯವನು ಮಾಡಿ
ಅಂತ್ಯದಿ ಯವನರ ಸವರಿದಗೆ
ಚಿಂತಿಪ ದಾಸರ ಚಿಂತಾಮಣಿಗೆ
ಸಿರಿಕಾಂತ ಪ್ರಸನ್ವೆಂಕಟದಾಸನಿಗೆ 3
*********