Monday, 18 November 2019

ಆದಿನಾಥಗೆ ಜಯಮಂಗಳ ಶ್ರೀಧರ ಮೂರ್ತಿಗೆ ಶುಭಮಂಗಳ ankita prasannavenkata

ಆದಿನಾಥಗೆ ಜಯಮಂಗಳ
ಶ್ರೀಧರ ಮೂರ್ತಿಗೆ ಶುಭಮಂಗಳ ಪ.

ಧರಿಸಿ ನಾವೆಯ ಸತ್ಯವ್ರತನ 
ಪಾವನ ಮಾಡಿಚರಿಸದೆ ಮಂದರಗಿರಿಯ 
ಹೊತ್ತುಧರೆಯ ನೆಗಹಿ ಬಂಗಾರಗಣ್ಣಿನವನ
ಹರಿದು ದೈತ್ಯಜಗೊಲಿದು ಬಂದವಗೆ 1

ಸುರಪನಂತಸ್ತಾಪ ತರಿದು 
ಧರಿತ್ರಿಯಸುರರಿಗೆ ಸಕಲ ಪದವಿಯನಿತ್ತು
ಶರಧಿಯ ದಾಟಿ ದಶಶಿರನ ತಲೆ ಚಿವುಟಿ
ತುರುಗಾಯ್ದ ಗೋಪೇರ ಅರಸನಿಗೆ 2

ಅಂತರಾಳ ಪಟ್ಟಣಕಪಾಯವನು ಮಾಡಿ
ಅಂತ್ಯದಿ ಯವನರ ಸವರಿದಗೆ
ಚಿಂತಿಪ ದಾಸರ ಚಿಂತಾಮಣಿಗೆ
ಸಿರಿಕಾಂತ ಪ್ರಸನ್ವೆಂಕಟದಾಸನಿಗೆ 3
*********

No comments:

Post a Comment