ವಿದ್ಯಾಪ್ರಸನ್ನ ತೀರ್ಥರ ಕೃತಿ
ಹನುಮನ ಮನೆಯವರು ನಾವೆಲ್ಲರೂ।
ಹನುಮನ ಮನೆಯವರು ।। ।। ಪ ।।
ಅನುಮಾನ ಪಡೆದೆಲೆ ಸ್ಥಳವ ಕೊಡಿರಿ ಎಮಗೆ ।। ।। ಅ . ಪ ।।
ಊರ್ಧ್ವಪುಂಡ್ರವ ನೋಡಿ ಶ್ರದ್ಧೆ ಭಕುತಿ ನೋಡಿ ।
ಹೃದ್ಗಕ್ತವಾದೆಮ್ಮ ತತ್ತ್ವಗಳನೆ ನೋಡಿ।।
ಇದ್ದುದನಿಲ್ಲೆಂಬ ಅಬದ್ಧ ನುಡಿವರಲ್ಲಾ ।
ಮಧ್ವಮುನಿಯು ನಮ್ಮ ತಿದ್ದಿರುವುದ ನೋಡಿ ।। ।।೧।।
ಸತ್ಯ ಮಿಥ್ಯಗಳಿಗೆ ಅಂತರ ಬಲ್ಲೆವು ।
ಉತ್ತಮ ನೀಚರೆಂಬುವ ಭೇದ ಬಲ್ಲೆವು ।।
ಸುತ್ತಲು ಕಂಡು ಕಾಣದ ಇಹ ಎಲ್ಲಕ್ಕೂ ।
ಉತ್ತಮನೊಬ್ಬನೇ ಹರಿಯೆಂದು ಬಲ್ಲೆವು ।। ।।೨।।
ಹಲವು ಲೋಕಗಳುಂಟೆಂಬುದ ಬಲ್ಲೆವು ।
ಹಲವು ಯೋನಿಗಳಲ್ಲಿ ಜನ್ಮಗಳೊಲ್ಲವು ।।
ಅಳವ ಭೋಧರು ನಮ್ಮ ಕಳುಹಿದರಿಲ್ಲಿಗೆ ।
ತಿಳಿಸಿ ಪ್ರಸನ್ನ ಶ್ರೀ ಹರಿಗೆ ವಿಚಾರವ ।। ।। ೩।।
***
ಹನುಮನ ಮನೆಯವರು ನಾವೆಲ್ಲರೂ।
ಹನುಮನ ಮನೆಯವರು ।। ।। ಪ ।।
ಅನುಮಾನ ಪಡೆದೆಲೆ ಸ್ಥಳವ ಕೊಡಿರಿ ಎಮಗೆ ।। ।। ಅ . ಪ ।।
ಊರ್ಧ್ವಪುಂಡ್ರವ ನೋಡಿ ಶ್ರದ್ಧೆ ಭಕುತಿ ನೋಡಿ ।
ಹೃದ್ಗಕ್ತವಾದೆಮ್ಮ ತತ್ತ್ವಗಳನೆ ನೋಡಿ।।
ಇದ್ದುದನಿಲ್ಲೆಂಬ ಅಬದ್ಧ ನುಡಿವರಲ್ಲಾ ।
ಮಧ್ವಮುನಿಯು ನಮ್ಮ ತಿದ್ದಿರುವುದ ನೋಡಿ ।। ।।೧।।
ಸತ್ಯ ಮಿಥ್ಯಗಳಿಗೆ ಅಂತರ ಬಲ್ಲೆವು ।
ಉತ್ತಮ ನೀಚರೆಂಬುವ ಭೇದ ಬಲ್ಲೆವು ।।
ಸುತ್ತಲು ಕಂಡು ಕಾಣದ ಇಹ ಎಲ್ಲಕ್ಕೂ ।
ಉತ್ತಮನೊಬ್ಬನೇ ಹರಿಯೆಂದು ಬಲ್ಲೆವು ।। ।।೨।।
ಹಲವು ಲೋಕಗಳುಂಟೆಂಬುದ ಬಲ್ಲೆವು ।
ಹಲವು ಯೋನಿಗಳಲ್ಲಿ ಜನ್ಮಗಳೊಲ್ಲವು ।।
ಅಳವ ಭೋಧರು ನಮ್ಮ ಕಳುಹಿದರಿಲ್ಲಿಗೆ ।
ತಿಳಿಸಿ ಪ್ರಸನ್ನ ಶ್ರೀ ಹರಿಗೆ ವಿಚಾರವ ।। ।। ೩।।
***
ರಾಗ : ಬಿಲಹರಿ ತಾಳ : ಆದಿ (raga tala may differ in audio)