Showing posts with label ನಿತ್ಯ ವ್ಯಾಸತತ್ವಜ್ಞರಂಘ್ರಿ ಭಜಿಸೊ shyamasundara vyasatatwajna stutih. Show all posts
Showing posts with label ನಿತ್ಯ ವ್ಯಾಸತತ್ವಜ್ಞರಂಘ್ರಿ ಭಜಿಸೊ shyamasundara vyasatatwajna stutih. Show all posts

Friday, 27 December 2019

ನಿತ್ಯ ವ್ಯಾಸತತ್ವಜ್ಞರಂಘ್ರಿ ಭಜಿಸೊ ankita shyamasundara vyasatatwajna stutih

ನಿತ್ಯ ವ್ಯಾಸತತ್ವಜ್ಞರಂಘ್ರಿ ಭಜಿಸೊ | 
ಕೃತ ಕೃತ್ಯನೆಂದೆನಿಸೊ |
ಎತ್ತಿದ ಮಾನವ ಜನ್ಮ ಸಾರ್ಥಕೆನಿಸೊ | 
ಪುರುಷಾರ್ಥವಗಳಿಸೊ ಪ

ಮೂರುವತಾರನ ಮತದೊಳು ಜನಿಸಿದರು
ಮೂರನು ತ್ಯಜಿಸಿದರು
ಮೂರು ಹತ್ತರಿಗೆ ಮುಖವಾಗಿರುತಿಹರು
ಇವರಿಗೆ ಸಮರ್ಯಾರೊ 1

ಮಾನವ ಸ್ಮøತಿ ಮೊದಲಾದ ಗ್ರಂಥಗೈದ
ದ್ವಿಜರಿಗೆ ಬೋಧಿಸಿದ ||
ಸಾನುರಾಗದಲಿ ಜ್ಞಾನಾಮೃತವೆರೆದ
ದಶದಿಕ್ಕಿಲಿ ಮೆರೆದ |
ಏನು ಪೇಳಲಿ | ಇವರ ದಿವ್ಯಪಾದ |
ಸೇವಿಪರಿಗೆ ಮೋದ 2

ಶಾಮಸುಂದರನ ಕವನದಿ ಕೊಂಡಾಡಿ
ಬಹಿರಂತರ ನೋಡಿ ||
ಸೋಮಪುರದಿ ದ್ವಿಜ ಸ್ತೋಮದಿಂದ ಕೂಡಿ
ಇರುವರು ಮನೆ ಮಾಡಿ
ಈ ಮಹಾತ್ಮರನು ನರನೆಂದವ ಖೋಡಿ
ಸಂದೇಹ ಬ್ಯಾಡಿ3
**********