Showing posts with label ಸತ್ಯಬೋಧ ಸ್ವಾಮಿಯವರು others satyabodha teertha stutih. Show all posts
Showing posts with label ಸತ್ಯಬೋಧ ಸ್ವಾಮಿಯವರು others satyabodha teertha stutih. Show all posts

Friday, 27 December 2019

ಸತ್ಯಬೋಧ ಸ್ವಾಮಿಯವರು others satyabodha teertha stutih

ಸತ್ಯಬೋಧ ಸ್ವಾಮಿಯವರು | 
ಸತ್ಯಬೋಧ ಗುರುಮತ್ರ್ಯ ಜನರ 
ಭವ ಮೃತ್ಯು ಉದ್ಧರಿಸುತಿಹರು |
ಸತ್ಯ ಸ್ವರೂಪ ಹರಿ ಪ

ಯತಿಗಳಲಗ್ರಣಿಯು ಆಶ್ರಮ ಚತುರ್ಥ ಪದವಅತಿಶಯ ಗುಣಕ್ರೀತ ಮತ ಸ್ಥಾಪನ |ಸತತ ತಪಸುಪೂರಿತ ... 1

ಅರಿಷಡ್ಗಳ ಕಡಿದಿಹ ನಿರುತವರ ಭಯಗಳ |ಇರಿಸುವ ಸಕಲರ ತಾರಿಸುವ ಇಳೆಗವ-ತಿರಿಸಿಹ ಸುರರೂಪ ಋಷಿ ಮಹಾತ್ಮರು 2

ಶಮಷಟ್ಕಾದಿಗಳ ಸಾಧನ | ಕ್ರಮವನುಕೂಲಲಿಹವು |ಯಮ ನಿಯಮ ಕ್ರಮ ವಿಮಲ ಅಷ್ಟಾಂಗದಸುಮನ ಸುಯೋಗ ಅನುಪಮ ಸಚಿನ್ಮಯ 3

ಕ್ಲೇಶಪಂಚಗಳನು ಕಳೆದಿಹ | ಪಾಶವಂಟದವನು |ದೇಶಿಕನೆನಿಸುತ ಪೋಷಿಸುವ ಭಕ್ತರ |ಗಾಸಿಯ ನಂದಿಸುವೀಶ ಸೆರೆ ಬಿಡಿಸಯ್ಯ 4

ರಾಮಚಂದ್ರ ಮೂರ್ತಿ ಪೂಜೆಯ | ಪ್ರೇಮಯುಕ್ತ ಭಕ್ತಿಕೂರ್ಮವರ ಶ್ರೀ ವಾಮನ ನರಹರಿ ಪ್ರೇಮದಿ ನಡಿಸುವ ಸ್ವಾಮೀ ರಾಯ ಬಲಿ 5

ಸವಣೂರ ಸ್ಥಳದಿ ಇರುವ ತ್ರಿ- | ಭುವನ ಮಠ ಸ್ಥಾನದಿ |ತವಕದಿ ತಿಳಿಯದು ಇವರ ಮಹಾತ್ಮೆಯುಶಿವ ಶಂಕರಸಖನೊಬ್ಬನಿಗಲ್ಲದೆ 6
***********