Showing posts with label ಶೇಷನುತ ಗೋಪ ವಿಠ್ಠಲ ನೀ ಸಲಹೊ ಇವಳಾ gurugovinda vittala. Show all posts
Showing posts with label ಶೇಷನುತ ಗೋಪ ವಿಠ್ಠಲ ನೀ ಸಲಹೊ ಇವಳಾ gurugovinda vittala. Show all posts

Wednesday 1 September 2021

ಶೇಷನುತ ಗೋಪ ವಿಠ್ಠಲ ನೀ ಸಲಹೊ ಇವಳಾ ankita gurugovinda vittala

ಗುರುಗೋವಿಂದವಿಠಲರು

ಶೇಷನುತ ಗೋಪ ವಿಠ್ಠಲ | ನೀ ಸಲಹೊ ಇವಳಾ ಪ 

ವಾಸದೇವನೆ ನಿನ್ನ | ಪ್ರಾರ್ಥಿಸುವೆ ಹರಿಯೇ ಅ.ಪ. 

ಕನ್ಯೆ ಬಹು ಭಾವುಕಳು | ನಿನ್ನೆಯಿಂ ಪ್ರಾರ್ಥಿಪಳುಘನ್ನ ಹರಿದಾಸ್ಯದಲಿ | ಮುನ್ನಮನವಿರಿಸೀ |ಇನ್ನು ತೈಜಸರೂಪ | ಚೆನ್ನ ಶೇಷನು ಆಗೆಮಾನ್ಯರೂ ಪರಮಗುರೂ | ವನ್ನೆ ಕಂಡಿಹಳೋ 1 

ಗುರುತರೂಪಿ ತೈಜಸನು | ವ್ಯಾಸಪೀಠದ ಮುಂದೆಇರುತ ಗುರು ರಾಜರ | ಮಹಿಮೆ ಪೇಳುತಲೀ |ಹರಿಸುತಲಿ ಕನ್ಯೆಗೇ | ಫಲಪುಷ್ಪ ತಾಂಬೂಲದೊರಕಿಸಿಹ ಅದರಿಂದೆ | ಉಪದೇಶವಿತ್ತೇ 2 

ಪತಿಸೇವೆ ದೊರಕಿಸುತ | ಕೃತ ಕಾರ್ಯಳೆಂದೆನಿಸೊಹಿತವಹಿತವೆರಡರಲಿ | ರತಿ ಇಡದೆ ಉಂಬಾ |ಮತಿಯನ್ನೇ ಕರುಣಿಸುತಾ | ಮತಿಮತಾಂವರರಂಘ್ರಿಶತಪತ್ರ ಸೇವೆಯಲಿ | ರತಳು ಎಂದೆನಿಸೊ 3 

ಭವ | ಸಾಗರದ ಬತ್ತಿಪುದುಮರುತಾಂತರಾತ್ಮ ಹರಿ | ವೇಣುಗೋಪಾಲಾ 4 

ಭಾವ ಮೈದುನಗೊಲಿದ | ಶ್ರೀವರನೆ ಮೈದೋರಿಭಾವುಕಳೆ ಪೊರೆಯೆಂದು | ಪ್ರಾರ್ಥಿಸುವೆ ಹರಿಯೇ |ಸಾರ್ವಭೌಮನೆ ಹರಿಯೆ | ಕೋವಿದೋತ್ತಂಸ ಗುರುಗೋವಿಂದ ವಿಠ್ಠಲನೆ | ನೀವೊಲಿಯ ಬೇಕೋ 5

***