Audio by Vidwan Sumukh Moudgalya
..
ಶ್ರೀದಾಮೋದರಾಚಾರ್ಯ ವಿರಚಿತ
( ತಂದೆ ಜಗನ್ನಾಥವಿಠ್ಠಲಾಂಕಿತ )
ಶ್ರೀ ಜಗನ್ನಾಥದಾಸರ ಸ್ತೋತ್ರ ಪದ
ರಾಗ : ಧರ್ಮವತಿ ಆದಿತಾಳ
ದಯಪಾಲಿಸೋ ಜಗನ್ನಾಥದಾಸ ಮನ್ಮನೋ ಅಭಿಲಾಷ॥ಪ॥
ದಯವಪಾಲಿಸಿ ಜ್ಞಾನವಂತನೆನಿಸು ದುರುಬುದ್ಧಿಯ ಬಿಡಿಸೋ
॥ಅ.ಪ॥
ಲೋಕದೊಳಗೆ ನಿನ್ನ ದಾಸನು ಎನ್ನೆನಿಸೊ
ಕೂಕರ್ಮವ ಬಿಡಿಸೋ
ಸಾಕುಸಾಕು ದುರ್ಜನರ ಸಂಗ ತ್ಯಜಿಸೋ
ಸನ್ಮಾರ್ಗವಪಿಡಿಸೊ॥೧॥
ಇನ್ನು ಅನುಮಾನವ್ಯಾತಕಯ್ಯಾ
ಪಿಡಿ ಬ್ಯಾಗನೆ ಕೈಯ್ಯಾ
ಎನ್ನ ಮೊರೆಯ ಕೇಳ ಜ್ಞಾನವಂತನೈಯ
ಚಿನ್ಮನ ಪೊರಿಯೈಯ್ಯ ॥೨॥
ಎಂದೆಂದಿಗು ನಿನ ಸೇವಕ ನಾನಯ್ಯಾ
ಪೋಷಿಸ ಬೇಕಯ್ಯಾ
ತಂದೆಜಗನ್ನಾಥವಿಠ್ಠಲನ ಪ್ರೀಯಾ
ಕರುಣದಿ ಸಲಹಯ್ಯಾ ॥೩॥
****