ಕಂದನ ಕಾಣಿರೇನೆ ಗೋಪಿಯ ಕಂದ || ಪಲ್ಲವಿ ||
ಕಂದನಲ್ಲವೆ ಎನ್ನ ಕುಂದಣದರಗಿಣಿಯೆ || ಅನು ಪಲ್ಲವಿ ||
ಉಂಗುರನಿಟ್ಟಿದ್ದೆ ಉಡಿದಾರ ಕಟ್ಟಿದ್ದೆ
ಬಂಗಾರದ ಟೊಪ್ಪಿಗೆ ತಲೆಯ ಮೇಲಿಟ್ಟ || ೧ ||
ರೊಟ್ಟಿಯ ಸುಟ್ಟಿದ್ದೆ ತುಪ್ಪವ ಕಾಸಿದ್ದೆ
ಇಷ್ಟು ಹೊತ್ತು ಹೋಯಿತು ಉಣಲಿಲ್ಲ || ೨ ||
ಕಾಶಿಗೆ ಹೋಗಿ ನಾ ಕೂಸಿನ ಪಡೆದೆ ಪುರಂದರವಿಠಲನ
ದಾಸರಿಗೆ ತಕ್ಕ ಮಗುವೇ ನಮ್ಮಮ್ಮ || ೩ ||
****
ರಾಗ ಸಾವೇರಿ/ಚಾಪು ತಾಳ (raga, taala may differ in audio)
pallavi
kandana kANirEne gOpiya kanda
anupallavi
kandanallave enna kundaNa daragiNiye
caraNam 1
unguraniTTidde uDidAra kaTTidde bangArada Toppige taleya mEliTTa
caraNam 2
roDDiya suTTidde tuppava kAsidde iSTu hottu hOyitu uNalilla
caraNam 3
kAsige hOgi nA kUsina paDede purandara viTTalana dAsarige takka maguvEnamma
***