ರಾಗ ಯದುಕುಲಕಾಂಭೋಜ ಆದಿತಾಳ
ಒಮ್ಮೆ ನೆನೆಯಲು ನಮ್ಮ ದೇವ ||ಪ||
ಗಮ್ಮನೆ ಓಡಿಬರುವ ಬೊಮ್ಮನಯ್ಯನು ಬೇಗ ||ಅ||
ಪಂಡರಿನಾಥನು ಪಾಂಡವರ ಮಿತ್ರನು
ಕೊಂಡಾಡುವರ ಮನೆ ತೊಂಡನಾಗುವನು ||
ವಯ್ಯಾರ ನಡೆಗಾರ ಹೊಯ್ಲು ಮಾಡುವ ಚೋರ
ಮುಯ್ಯಕ್ಕೆ ಮುಯ್ಯ ತೆಗೆವ ಅಯ್ಯನಯ್ಯ ||
ಉತ್ತಮ ಪುರುಷನು ಮತ್ತೇನೆಂಬೆ ನಾನು
ಎತ್ತ ನೋಡಿದರು ಅತ್ತತೋರುತಲಿರ್ಪ ||
ಸಚ್ಚಿದಾನಂದ ರೂಪ ಹೆಚ್ಚಾಗಿ ಸಲಹುವ
ಮುಚ್ಚಾಗಿ ಭಜಿಪರ ಅಚ್ಯುತಾನಂತ ಕೃಷ್ಣ ||
ಸಂಕರ್ಷಣ ನಾಮ ತಂದೆ ಪುರಂದರವಿಠಲನ
ಸಂಕೀರ್ತನೆ ಮಾಡೆ ಸುಂಕವ ಕೇಳ ಯಮ ||
***
ಒಮ್ಮೆ ನೆನೆಯಲು ನಮ್ಮ ದೇವ ||ಪ||
ಗಮ್ಮನೆ ಓಡಿಬರುವ ಬೊಮ್ಮನಯ್ಯನು ಬೇಗ ||ಅ||
ಪಂಡರಿನಾಥನು ಪಾಂಡವರ ಮಿತ್ರನು
ಕೊಂಡಾಡುವರ ಮನೆ ತೊಂಡನಾಗುವನು ||
ವಯ್ಯಾರ ನಡೆಗಾರ ಹೊಯ್ಲು ಮಾಡುವ ಚೋರ
ಮುಯ್ಯಕ್ಕೆ ಮುಯ್ಯ ತೆಗೆವ ಅಯ್ಯನಯ್ಯ ||
ಉತ್ತಮ ಪುರುಷನು ಮತ್ತೇನೆಂಬೆ ನಾನು
ಎತ್ತ ನೋಡಿದರು ಅತ್ತತೋರುತಲಿರ್ಪ ||
ಸಚ್ಚಿದಾನಂದ ರೂಪ ಹೆಚ್ಚಾಗಿ ಸಲಹುವ
ಮುಚ್ಚಾಗಿ ಭಜಿಪರ ಅಚ್ಯುತಾನಂತ ಕೃಷ್ಣ ||
ಸಂಕರ್ಷಣ ನಾಮ ತಂದೆ ಪುರಂದರವಿಠಲನ
ಸಂಕೀರ್ತನೆ ಮಾಡೆ ಸುಂಕವ ಕೇಳ ಯಮ ||
***
pallavi
omme neneyalu namma dEva
anupallavi
gammane Odibaruva bommanayyanu bEga
caraNam 1
paNaDarinAthanu pANDavara mitranu koNDADuvara mane toNDanAguvanu
caraNam 2
vayyAra naDegAra hoilu mADuva cOra muyyakke muyya tekhava ayyanayya
caraNam 3
uttama puruSanu mattEnembe nAnu etta nODidaru attatOrutalirpa
caraNam 4
saccidAnanda rUpa heccAgi salahuva muccAgi bhajipara acyutAnanda krSNa
caraNam 5
sankarSaNa nAma tande purandara viTTalana sankIrtane mADe sungava kELa yama
***