Showing posts with label ಅರಿಯಧಮನ ಸಂಗ ಕರಗಿದ್ದ purandara vittala. Show all posts
Showing posts with label ಅರಿಯಧಮನ ಸಂಗ ಕರಗಿದ್ದ purandara vittala. Show all posts

Tuesday, 3 December 2019

ಅರಿಯಧಮನ ಸಂಗ ಕರಗಿದ್ದ purandara vittala

ಅರಿಯಧಮನ ಸಂಗ ಕರಗಿದ್ದ ಹಿತ್ತಾಳೆಒರೆದು ನೋಡಲು ಬಣ್ಣ ಬರುವುದೇ ಹೇಳಿ ಪ.

ಮಂಜುನೀರನೆ ತಂದು ತಂದನವ ಹದಮಾಡಿಒಂದಾಗಿ ಕೂಡಿ ಪರಿಮಳವ ಬೇಗಹಂದಿಯನು ಕರೆದು ಸೆಲೆ - ಪೊಸಲು ಅದು ತನ್ನಗಂಜಲವ ನೆನೆನೆನೆದು ಹೋಹಂತೆ ರಮಣಿ 1

ಚೀನಿಕೋಲನೆ ತಂದು ಕೊರೆದು ತುಂಡನೆ ಮಾಡಿಶ್ವಾನನನು ಕರೆದು ಬಾಯೊಳಗಿರಿಸಲುತಾನದನು ಸವಿಸವಿದು ನೋಡಲರಿಯದ ತನ್ನದನದ ಮೂಳೆಯ ನೆನೆದು ಹೋಹಂತೆ ರಮಣಿ 2

ಅಂತರವನರಿಯದಲೆ ಮಿಯಾ ಹೋಗುವುದರಿಂದಅಂತೆ ಇರುವುದೇ ಲೇಸು ಬಹು ಪ್ರೌಢರುಚಿಂತಿತಾರ್ಥವನೀವ ಸುಗುಣ ಪುರಂದರವಿಠಲನೆಂತೆಂತು ಭಜಿಸಿದರೆ ಅಂತಂತೊಲಿವನಲ್ಲರೆ 3
******