.. ..
kruti by shantibai dasaru ಶಾಂತಿಬಾಯಿ ದಾಸರು
ಆರತಿ ಬೆಳಗುವೆ ಕೂಟದಲಿ ಮಂಗಳಾರತಿ
ನೋಡುವೆ ನೋಟದಲಿ
ಧೀರ ಶ್ರೀಗುರು ಮಹಾ ತಾರಕ ಬ್ರಹ್ಮನ ಆರತಿ
ನೋಡುವೆ ನೋಟದಲಿ ಪ
ಗಂಗೆ ಯಮುನೆಗಳ ಸಂಗಮದೀ ಮಿಂದು
ಅಂಗ ಸಂಗ ರಹಿತಾಂಗನದೇ
ಮಂಗಳಾಂಗ ದಿವ್ಯಾಂಗಪೂಜೆಯ ಮಾಡಿ
ರಂಗ ಮಂಟಪ ಪಾಂಡುರಂಗನಿಗೆ 1
ಈಡೆ ಪಿಂಗಳೆಗಳ ಜೋಡುಗೂಡಿ
ಮೂಡು ರವಿಶಶಿ ಸೂಡಿ ಮಧ್ಯಿರುವಾಗ್ನಿ
ಗೂಡಿನೋಳಾಡುವಜೀವನ ವಿಚಾರೋನ್ಮೂರ್ತಿಗೆ 2
ಹೃದಯದಿ ಬೆರಿತು ಹಂಸನ ಭರದಿ
ತಿರುಗಿತಲೆರಡೊಂದೊಂಕಾರದಿ
ಎರಕವಾಗಿ ಸಸ್ವರದಿ ಮನ
ಪರಮ ಪುರುಷ ದಿವ್ಯಾಂಗನಿಗೆ 3
ಒಳಹೊರಗೊಂದಾಗಿ ದೇವಾ
ಸುಲಭದಿ ಭಕ್ತರ ಸುಖವೀವಾ
ಥಳಥಳ ಹೊಳೆಯುವ ಕಳೆಯೊಳು
ಬೆಳಗುವ ನಲಿನಲಿದಾಡಿ4
ಆರು ಚಕ್ರಗಳ ಮೀರಿ ಮುಂದಣ ಸಣ್ಣ
ದಾರಿಹಿಡಿದು ಹಿಂದಕೆ ನಡೆದು
ತೋರುವ ಪರಿಪೂರ್ಣ ತಾರಕ ಬ್ರಹ್ಮನ
ಸೇರಿ ನಿರ್ಬಯಲಾ ಚಿದ್ರೂಪಗೆ 5
ಅಂತರ್ಯಾಮಿ ಪೂರ್ಣಾಂತರದಿ
ನಿಶ್ಚಿಂತ ಮೂರ್ತಿ ಹೃದಯಾಂತರದಿ
ಸಂತ ಸಾಧು ನಿಜ ಶಾಂತಿ ಪಾಲಿಪ ಗುರು
ಚಿಂತೆರಹಿತ ನಿಶ್ಚಿಂತದಲಿ 6
***