Showing posts with label ಕರುಣಿಸೋ ಗುರುವೆ ಚರಣಸ್ಮರಣೆಯ ನಿಮ್ಮ mahipati. Show all posts
Showing posts with label ಕರುಣಿಸೋ ಗುರುವೆ ಚರಣಸ್ಮರಣೆಯ ನಿಮ್ಮ mahipati. Show all posts

Wednesday, 11 December 2019

ಕರುಣಿಸೋ ಗುರುವೆ ಚರಣಸ್ಮರಣೆಯ ನಿಮ್ಮ ankita mahipati

by ಮಹಿಪತಿದಾಸ
ರಾಗ ಭೈರವಿ ಕೇರವಾ ತಾಳ

ಕರುಣಿಸೊ ಗುರುವೆ ಚರಣಸ್ಮರಣೆಯ ನಿಮ್ಮ ||ಪ||

ಸ್ಮರಿಸಲಿಕ್ಕೆ ನಾ ನಿಮ್ಮ ತರಳ ಪ್ರಹ್ಲಾದನಲ್ಲ
ಅರಿತು ಮಾಡುವುದು ದಯ ತರಣೋಪಾಯದ ||೧||

ಒಲಿಸಿಕೊಳ್ಳಲು ನಿಮ್ಮ ಫಲ್ಗುಣನಂಥವನಲ್ಲ
ಗೆಲಿಸುವದೋ ನೀ ಸುಪಥ ನೆಲೆ ನಿಭದೋರಿ ||೨||

ಮೊರೆ ಇಡಲು ನಾ ನಿಮ್ಮ ಕರಿರಾಜನಂಥವನಲ್ಲ
ಕರುಣಿಸುವುದೊ ಎನಗೆ ಅರವಿಡಿದು ಪೂರ್ಣ ||೩||

ಶರಣು ಹೋಗಲು ನಿಮ್ಮ ಧೀರ ವಿಭೀಷಣನಲ್ಲ
ಪಾರ ಗೆಲಿಸುವದೊ ನಿಮ್ಮ ವರಕೃಪೆಯಿಂದ ||೪||

ಭಕ್ತಿಮಾಡಲು ನಿಮ್ಮ ಶಕ್ತ ಸಮರ್ಥನಲ್ಲ
ಯುಕ್ತಿದೋರುವದೊ ನಿಮ್ಮ ಮುಕ್ತಿ ಮಾರ್ಗದ ||೫||

ಸ್ತುತಿಯ ಮಾಡಲು ನಿಮ್ಮ ಅತಿಶಯ ಭಕ್ತ ನಾನಲ್ಲ
ಗತಿಸುಖದೋರೆನಗೆ ಪತಿತಪಾವನ ||೬||

ದಾಸರ ದಾಸನೆಂದು ಲೇಸಾಗಿ ಮಹಿಪತಿಗೆ
ವಾಸನೆ ಪೂರಿಸೊ ಪೂರ್ಣ ದೇಸಿಗರ ದೇವ ||೭||
****

ಕಾಖಂಡಕಿ ಶ್ರೀ ಮಹಿಪತಿರಾಯರು

ಕರುಣಿಸೊ ಗುರುವೆ ಚರಣ ಸ್ಮರಣೆಯು ನಿಮ್ಮ  ಪ


ಸ್ಮರಿಸಲಿಕ್ಕೆ ನಾ ನಿಮ್ಮ ತರಳ ಪ್ರಹ್ಲಾದನಲ್ಲ ಅರಿತು ಮಾಡುವದು ದಯ ತರಣೋಪಾಯದ 1 

ಒಲಿಸಿಕೊಳ್ಳಲು ನಿಮ್ಮ ಫÀಲ್ಗುಣನಂಥವನಲ್ಲ ಗೆಲಿಸುವದೊ ನೀ ಸುಪಥ ನೆಲೆನಿಭದೋರಿ 2 

ಮೊರೆ ಇಡಲು ನಾ ನಿಮ್ಮ ಕರಿರಾಜನÀಂಥವನಲ್ಲ ಕರುಣಿಸುವದೊ ಎನಗೆ ಕರವಿಡಿತು ಪೂರ್ಣ 3 

ಶರಣ ಹೋಗಲು ನಿಮ್ಮ ಧೀರ ವಿಭೀಷಣನಲ್ಲ ಪಾರ ಗೆಲಿಸುವದೊ ನಿಮ್ಮ ವರಕೃಪೆಯಿಂದ 4 

ಭಕ್ತಿ ಮಾಡಲು ನಿಮ್ಮ ಶಕ್ತಸಮಥನಲ್ಲ ಯುಕ್ತಿದೋರುವದೊ ನಿಮ್ಮ ಮುಕ್ತಿಮಾರ್ಗದ 5 

ಸ್ತುತಿಯ ಮಾಡಲು ನಿಮ್ಮ ಅತಿಶಯ ಭಕ್ತ ನಾನಲ್ಲ ಗತಿಸುಖದೋರುದೆನಗೆ ಪತಿತಪಾವನ 6 

ದಾಸರ ದಾಸನೆಂದು ಲೇಸಾಗಿ ಮಹಿಪತಿಗೆ ವಾಸನೆ ಪೂರಿಸೊ ಪೂರ್ಣ ದೇಸಿಗರ ದೇವ 7

***