Showing posts with label ಪರತರ ಪರವಸ್ತು ಸಗುಣಾವತಾರಗೆ ಪರಮೇಷ್ಟಿ ರೂಪಿಣೀ ಸ್ಥಿತಿಸುವಗೆ bheemashankara. Show all posts
Showing posts with label ಪರತರ ಪರವಸ್ತು ಸಗುಣಾವತಾರಗೆ ಪರಮೇಷ್ಟಿ ರೂಪಿಣೀ ಸ್ಥಿತಿಸುವಗೆ bheemashankara. Show all posts

Friday, 6 August 2021

ಪರತರ ಪರವಸ್ತು ಸಗುಣಾವತಾರಗೆ ಪರಮೇಷ್ಟಿ ರೂಪಿಣೀ ಸ್ಥಿತಿಸುವಗೆ ankita bheemashankara

 ..

 kruti by ಭೀಮಾಶಂಕರರು ದಾಸರು bheemashankara


ಪರತರ ಪರವಸ್ತು ಸಗುಣಾವತಾರಗೆ ಪರಮೇಷ್ಟಿ ರೂಪಿಣೀ ಸ್ಥಿತಿಸುವಗೆ || ಹರಿಹರರೂಪಿಣೀ ವರದ ಸಂಹಾರಗೆ | ವಿರಹಿತವಾದ ಮಹದೇವಗೆ ಮಂಗಳ ಮಂಗಳ ಜಯಮಂಗಳ ಮಹದಾತ್ಮ ಲಿಂಗಗೆ 1


ಉತ್ಪತ್ತಿ ಸ್ಥಿತಿ ಲಯ ಕಾರಣರೂಪಗೆ | ಗುಪ್ತಗೂಢ ಗುಣತ್ರಯ ಸಾಕ್ಷಿಗೆ | ವ್ಯಾಪ್ತನಾಗಿ ತನ್ನೊಳು ತಾನಾದಗೆ | ಪ್ರಾಪ್ತುಳ್ಳ ಪುರುಷರ ಪಾಲಿಪಗೆ ||ಮಂ||2


ಹಂಸ ಪರಮಹಂಸಾಶ್ರಮದೊಳಿಹಗೆ | ಸ್ವಸಾಕ್ಷಿ ಸರ್ವ ದಂಭ ರಹಿತ ಸದೋದಿತಗೆ | ವಾಸವಾಗಿಹನು ತುಂಗಭದ್ರ ನಿಲಯಗೆ | ದಾಸ ಭೀಮಾಶಂಕರನ ಹೃದಯಾಬ್ಜದಾತ್ಮಗೆ || ಮಂ|| 3

***