ಹಾಲು ಕುಡಿಯೋ ಬಾರೊ ಬಾಲ ಶ್ರೀಕೃಷ್ಣಾ ನ l
ಮೈಮಾಕಳ ನೊರೆ ಹಾಲು ಕುಡಿಯೊ ಕಾದಾ ಕೆನೆ l
ಪಾಲು ಚಿತ್ರಾ ಬೆಣ್ಣೆ ಪಾಲೂ ll ಪ ll
ಕಂದಾ ನೀ ಹಸುದೀ ಎಂದು ತಂದಿನೀ ಪಾಲು ಗೋ l
ವಿಂದಾ ಬಾ ಎನ್ನ ತಂದೆ ಬಾ ನಿತ್ಯಾನಂದ ಬಾ ll 1 ll
ಬೆಣ್ಣೆ ಹಾಕಿದ ಪಾಲು ತಣ್ಣಗಾದವು ಬೇ l
ಗುಣ್ಣ ಬಾ ನಮ್ಮಣ್ಣ ಬಾ ಸಾಚಾರಣ್ಣ ಬಾ ll 2 ll
ಸಪ್ಪಾಗಿಲ್ಲವೋ ಜೇನುತುಪ್ಪದಂತೆ ಪಾಲು l
ಅಪ್ಪ ಬಾ ನಮ್ಮಪ್ಪ ಬಾ ಜಿತ ಕಂದರ್ಪಬಾ ll 3 ll
ಖಮ್ಮಾನಾ ಹಾಲಿವು ಧಮ್ಮಾವಾಗುವಿ ಕುಡಿದರೆ l
ತಮ್ಮ ಬಾ ನಮ್ಮಮ್ಮಾ ಬಾ ಪುರುಷೋತ್ತುಮ್ಮ ಬಾ ll 4 ll
ದುಗ್ದ ವಿದ್ಯಾ ಗುರುಮಧ್ವೇಶವಿಟ್ಠಲಾ l
ಸಿದ್ಧ ಬಾ ಸುಪ್ರಸಿದ್ಧ ಬಾ ನಿತ್ಯಾಭಿವೃದ್ಧ ಬಾ ll 5 ll
***