Showing posts with label ಹರಿನಮ್ಮೊಗತನ ಮಾಡಲೀಸನೆ ಕೇಳಮ್ಮ pranesha vittala. Show all posts
Showing posts with label ಹರಿನಮ್ಮೊಗತನ ಮಾಡಲೀಸನೆ ಕೇಳಮ್ಮ pranesha vittala. Show all posts

Monday 18 November 2019

ಹರಿನಮ್ಮೊಗತನ ಮಾಡಲೀಸನೆ ಕೇಳಮ್ಮ ankita pranesha vittala

by ಪ್ರಾಣೇಶದಾಸರು
ಹರಿನಮ್ಮೊಗತನ ಮಾಡಲೀಸನೆ ಕೇಳಮ್ಮ ಇವನಚರಿಯವಾರ ಮುಂಧೇಳುವನೆ ಗೋಪ್ಯಮ್ಮ ಪತನ್ನೊಳು ತಾನೇ ರುದಿಸುತ ಬಂದ ಕಾಣಮ್ಮ | ಯಾಕೆನೆಕಣ್ಣಿನ ಬೇನೆ ಅತಿ ಕಠಿಣೆಂದಾ ಅವನಮ್ಮ |ಸಣ್ಣನಳುವಳೆ ಮೊಲೆ ಹಾಲ್ತಾ ಎಂದನಮ್ಮ | ನಿನ ಕ-ಯ್ಯನ್ನು ಮುಟ್ಟಿದಿರೆಂದುಮಾನಕೊಂಡನಮ್ಮ 1

ತರುಗಳ ಬಾಲಕೆ ತರಳರ ಕೈ ಕಟ್ಟುವನಮ್ಮ | ಯನ್ನಕರದಲ್ಲಿ ಹಿಡಿ ಹಿಡಿಯೆಂದು ತೇಳಿಕ್ಕುವನಮ್ಮ ||ವರಗುವುದೆಲ್ಲಿ ನೀವೆಂದು ಕೇಳುವನಮ್ಮ | ನಿಮ್ಮಪುರುಷರು ಕಾಂಬುವಯಿಲ್ಲ ಎಲ್ಲೆಂಬುವನಮ್ಮ 2

ಜೋಗೀ ರೂಪವ ತಾಳಿ ಮನೆಗೆ ಬಂದನಮ್ಮ | ನಾನುಬಾಗಿ ಸುತರಿಲ್ಲೆಂದವನ ಕೇಳಿದೆನಮ್ಮ ||ಹೋಗಲಿ ಎಲ್ಲರೂ ಮಂತ್ರವ ಕೊಡುವೆನೆಂದಮ್ಮಾ | ಕೃಷ್ಣನಾಗಿ ಇದುರಿಗೆ ನಿಂತ ಭಂಡು ಕೇಳಮ್ಮ3

ನಾಕು ಬೆರಳ ತೋರಿ ತಲೆದೂಗುವನಮ್ಮ | ಇಂಥ-ದ್ಯಾಕೊ ಎಂದರೆ ಯೀಸೆ ಹಾಲ್ಕೊಡೆಂದನಮ್ಮ ||ಕಾಕುಬುದ್ಧಿಯೊಂದೆರಡೆ ಮೂರೇನಮ್ಮ | ಶ್ರೀ ಪಿ-ನಾಕಿಯಾಣೆ ಕರೆದು ಕೇಳೆ ಗೋಪ್ಯಮ್ಮ4

ಮತಿಗೆಠ್ಠೆಣ್ಹುಡುಗರ ಕರೆದೊಯ್ದೋಣ್ಯೊಳಗಮ್ಮಾ | ನಾವುಸತಿಪುರುಷಾಗ್ಯಾಡುವ ಬಾ ಎಂಬೊನಲ್ಲಮ್ಮ ||ಪೃಥಿವಿಯ ಹುಡುಗರ ತೆರದರೆ ಚಿಂತಿಲ್ಲಮ್ಮ | ಇವನುಸುತರನು ಪಡೆವದು ಬಲ್ಲನೇ ಸುಳ್ಳಮ್ಮ 5

ನವನೀತವ ಕೊಳ್ಳೆಂದೊದರುತ ಬಂದನಮ್ಮ | ನಾನುಹವರನ ಕಾಶಿಗೆ ಎಷ್ಟೆಂದು ಕೇಳಿದೆನೆಮ್ಮ ||ಖವ ಖವ ನಗುತಲಿ ಬದಿಬದಿಗೆ ಬಂದನಮ್ಮ | ತಕ್ಕೊಯುವತಿ ಇದರಷ್ಟೆಂದು ಕುಚ ಮುಟ್ಟುವನಮ್ಮ 6

ಹಿತ್ತಲ ಕದಕೆ ಶೀ(ಕೀ)ಲ್ಯುಂಟೋ ಇಲ್ಲೆಂಬುವನಮ್ಮ | ನಮ್ಮ-ಅತ್ತೆಯ ಕಣ್ಣು ಹೋಗಲಿ ಎನಬೇಕೇನಮ್ಮ ||ಉತ್ತರ ಕೊಡದಿರೆ ಒಪ್ಪಿದೆ ಇದಕೆಂಬುವನಮ್ಮ | ಇಷ್ಟೊಂ-ದರ್ಥೆ ಪ್ರಾಣೇಶ ವಿಠಲಗೆ ಯಶೋದೆಯಮ್ಮ 7
*******