Showing posts with label ಗುರುರಾಯ ನಮ್ಮ ಗುರುರಾಯನೇ ಶ್ರೀ ರಾಘವೇಂದ್ರ seetarama vittala. Show all posts
Showing posts with label ಗುರುರಾಯ ನಮ್ಮ ಗುರುರಾಯನೇ ಶ್ರೀ ರಾಘವೇಂದ್ರ seetarama vittala. Show all posts

Monday, 6 September 2021

ಗುರುರಾಯ ನಮ್ಮ ಗುರುರಾಯನೇ ಶ್ರೀ ರಾಘವೇಂದ್ರ ankita seetarama vittala

ರಾಗ: ಧನ್ಯಾಸಿ ತಾಳ: ಆದಿ


ಗುರುರಾಯ ನಮ್ಮ ಗುರುರಾಯನೇ ಶ್ರೀ ರಾಘವೇಂದ್ರ

ಗುರುರಾಯ ನಮ್ಮ ಗುರುರಾಯನೇ


ಬರುವವರ ಕಾಯುತ ಸರುವೇಷ್ಟವೀಯುತ

ಅರಳಿಸಿ ಮನಸುಮ ಪರಿಮಳ ಸುರಿಯುವ 1

ಪರಿತಾಪದಿಂದ ಬಂದ ಭಕುತರ ಮನ ಬೇಗೆ

ಕರಗಿಸುವುದು ನಿನ್ನ ನವನೀತ ಸಮ ಮನ 2

ಕರಗಲು ಮನವದು ಘೃತ ಸಮ ಕರುಣೆಯ

ಸುರಿವುದು ಗುರು ನಿನ್ನ ವರಪ್ರದ ಹಸ್ತ 3

ಪರಿಕಿಸಿನಿನ್ನ ಬಂದ ನಾಸ್ತಿಕ ಮರಳುವ

ಹರಿಹರಿಯೆನ್ನುತ ಹರಿಭಕ್ತಿ ಸವಿಯುತ 4

ನರಹರಿ ಸೀತಾರಾಮವಿಠಲಕೃಷ್ಣರ

ವರದಿಂದ ವರಗಳ ಸುರಿಸುವ ಗುರುವರ 5

***