Showing posts with label ಚಲಿಸುವ ಜಲದಲಿ ಮತ್ಸ್ಯನಿಗೆ ಗಿರಿಯ ಬೆನ್ನಲಿ purandara vittala dashavatara. Show all posts
Showing posts with label ಚಲಿಸುವ ಜಲದಲಿ ಮತ್ಸ್ಯನಿಗೆ ಗಿರಿಯ ಬೆನ್ನಲಿ purandara vittala dashavatara. Show all posts

Monday, 26 July 2021

ಚಲಿಸುವ ಜಲದಲಿ ಮತ್ಸ್ಯನಿಗೆ ಗಿರಿಯ ಬೆನ್ನಲಿ purandara vittala dashavatara

 .

ಚಲಿಸುವ ಜಲದಲಿ ಮತ್ಸ್ಯನಿಗೆ

ಗಿರಿಯ ಬೆನ್ನಲಿ ಪೊತ್ತ ಕೂರ್ಮನಿಗೆ

ಧರೆಯನುದ್ಧರಿಸಿದ ವರಾಹವತಾರಗೆ

ತರಳನ ಕಾಯ್ದ ಶ್ರೀ ನರಸಿಂಹಗೆ

ಮಂಗಲಂ ಜಯ ಮಂಗಲಂ ||


ಭೂಮಿಯ ದಾನವ ಬೇಡಿದಗೆ

ಆ ಮಹಾಕ್ಷತ್ರಿಯರ ಗೆಲಿದವಗೆ

ರಾಮಚಂದ್ರನೆಂಬ ದಶರಥಸುತನಿಗೆ

ಭಾಮೆಯರಸ ಗೋಪಾಲಕೃಷ್ಣಗೆ

ಮಂಗಲಂ ಜಯ ಮಂಗಲಂ ||


ಬತ್ತಲೆ ನಿಂತಿಹ ಬೌದ್ಧನಿಗೆ

ಉತ್ತಮ ಹಯವೇರಿದ ಕಲ್ಕಿಗೆ

ಹತ್ತವತಾರದಿ ಭಕ್ತರ ಸಲಹುವ

ಕರ್ತೃ ಶ್ರೀ ಪುರಂದರ ವಿಠಲನಿಗೆ

ಮಂಗಲಂ ಜಯ ಮಂಗಲಂ ||

***


chalisuva jaladali matsyanige

giriya bennali potta kUrmanige

dhareyanuddharisida varaahavataarage

taraLana kaayda shrI narasiMhage

maMgalaM jaya maMgalaM ||


bhUmiya daanava bEDidage

aa mahaakShatriyara gelidavage

raamachaMdraneMba dasharathasutanige

bhaameyarasa gOpaalakRuShNage

maMgalaM jaya maMgalaM ||


battale niMtiha bouddhanige

uttama hayavErida kalkige

hattavataaradi bhaktara salahuva

kartRu shrI puraMdara viThalanige

maMgalaM jaya maMgalaM ||

***