Showing posts with label ಒಲ್ಲೆ ದುರಿತಗಳೊಲ್ಲೆ ಒಲ್ಲೆ ಫುಲ್ಲನಾಭನ ಸ್ಮರಣೆ hayavadana OLLE DURITAGALOLLE OLLE PHULLANAABHANA SMARANE. Show all posts
Showing posts with label ಒಲ್ಲೆ ದುರಿತಗಳೊಲ್ಲೆ ಒಲ್ಲೆ ಫುಲ್ಲನಾಭನ ಸ್ಮರಣೆ hayavadana OLLE DURITAGALOLLE OLLE PHULLANAABHANA SMARANE. Show all posts

Monday, 13 December 2021

ಒಲ್ಲೆ ದುರಿತಗಳೊಲ್ಲೆ ಒಲ್ಲೆ ಫುಲ್ಲನಾಭನ ಸ್ಮರಣೆ ankita hayavadana OLLE DURITAGALOLLE OLLE PHULLANAABHANA SMARANE

ಒಲ್ಲೆ ದುರಿತಗಳೊಲ್ಲೆ ಒಲ್ಲೆ

ಫುಲ್ಲನಾಭನ ಸ್ಮರಣೆ ಇಲ್ಲದೆ ಇರಲೊಲ್ಲೆ ಪ.

ದುರ್ಜನರ ಸಂಗವನೆಂದೆಂದಿಗೂ ಒಲ್ಲೆಸಜ್ಜನರ ವಿರಸಗಳೊಲ್ಲೆ ಒಲ್ಲೆಅರ್ಜುನಸಖ ನಿನ್ನ ಸೇವೆಯ ಬಿಡಲೊಲ್ಲೆಅಬ್ಜಬಾಣನ ಮೇಳ ಒಲ್ಲೆ ಒಲ್ಲೆನೊ ಸ್ವಾಮಿ 1

ಬಲ್ಲೆನೆಂಬೊ ಅಹಂಕಾರ ಎಂದೆಂದಿ[ಗೂ]ಒಲ್ಲೆಸಲ್ಲದ ಸುಖಗ[ಳ]ಒಲ್ಲೆ ಒಲ್ಲೆಬಲ್ಲಿದ ಹರಿ ನಿಮ್ಮ ಪಾದವ ಬಿಡಲೊಲ್ಲೆಕ್ಷುಲ್ಲದೇವರ ಪೂಜೆ ಒಲ್ಲೆ ಒಲ್ಲೆನೊ ಸ್ವಾಮಿ 2

ಹರಿನಾಮ ಸ್ಮರಣೆಯ ಮನದಿ ತೊರೆದಿರಲೊಲ್ಲೆದುರುವಿಷÀಯದಿ ಹರುಷ ಒಲ್ಲೆ ಒಲ್ಲೆಕರುಣ ಹಯವದನನ್ನ ಕಂಡಲ್ಲದೆ ಮಿಕ್ಕಕಾರುಣ್ಯದ[ಹವಣು]ಒಲ್ಲೆ ಒಲ್ಲೆನೊ ಸ್ವಾಮಿ 3

***