ಏನಿದು ಎನ್ನಯ ಬಾಳು-ನರಹರೀ ಪ
ಶ್ರೀನಿಧಿಯನು ಮನಮನೆಯೊಳು ನಿಲಿಸದಾ ಅ.ಪ.
ಕಳೆಯಿತು ಆಯು-ಕಳೆಯಿತು ಕಾಯೊ
ಬೆಳೆಯಿತು ಆಶೆ-ಉಳಿಯಿತು ಸಾಧನ 1
ಹೊಟ್ಟೆಗೆ ಹಾಕೇ-ಪುಟ್ಟಿದು ದಾಯ್ತೇ
ಪೊಟ್ಟೆಯ ತುಂಬವೆ-ದುಷ್ಟ ಮೃಗಂಗಳು2
ಇಲ್ಲವು ತಾ ಹರಿ-ಎಲ್ಲವೂ ನೀನೇನೆ
ಇಲ್ಲವು ಯಾಕೇ-ಎಲ್ಲ ಕಾಲದಿ ಸುಖ 3
ಪುಟ್ಟವುದೇ ಜಗ-ಪುಟ್ಟಿಸ ನಿಲ್ಲದೇ
ಭ್ರಷ್ಠರ ಮತವಿದು-ಅಷ್ಟಕರ್ತನ ಬಿಡೆ 4
ಮಾನವಾ ತನುವಾ-ಬಾಹೋದೆ ದುರ್ಲಭ
ಮಾನದ ಶ್ರೀ ಕೃಷ್ಣ ವಿಠಲನ ತೋರದಿಹ5
****