Showing posts with label ಪಾಲೊಳಗದ್ದು ನೀರೊಳಗದ್ದು ಹರಿ rangavittala. Show all posts
Showing posts with label ಪಾಲೊಳಗದ್ದು ನೀರೊಳಗದ್ದು ಹರಿ rangavittala. Show all posts

Wednesday, 11 December 2019

ಪಾಲೊಳಗದ್ದು ನೀರೊಳಗದ್ದು ಹರಿ ankitya rangavittala

ಪಾಲೊಳಗದ್ದು ನೀರೊಳಗದ್ದು ಹರಿ
ನಾ ನಿನ್ನ ನಂಬಿದೆನೋ ll ಪ ll

ಜಲಜನಾಭ ನೀನಿಟ್ಟ ತೆರದಲ್ಲಿ ಇರುವೆನಯ್ಯ ll ಅ ಪ ll

ಸುಖದುಃಖದೊಳಗಿಡು ಸುಕೃತ ದುಷ್ಕೃತ ಮಾಡು
ನಿಖಿಳ ದುರಿತದೊಳೆನ್ನನೋಲ್ಯಾಡಿಸು
ಅಖಿಳಾ ಖಿಳನೆನಿಸು ಅಭಯ ಭಯವ ಸೂಸು
ಮಕರಕುಂಡಲ ನಿನ್ನ ಮತವೆ ಸನ್ಮತವಯ್ಯ ll 1 ll

ಜ್ಞಾನಾಜ್ಞಾನದೊಳಗಿಡು ಮಾನಾಪಮಾನವೆ ಮಾಡು
ಅನಾಥಾನಾಥರೊಳೆನ್ನ ಅನವರತಾಗಿರಿಸು
ದೀನಾದೀನತೆಯೊಳಗೆನ್ನ ನೀನೀಡ್ಯಾಡು
ಶ್ರೀನಾಥ ನಿನ್ನಯ ಮತವೆ ಸನ್ಮತವಯ್ಯ ll 2 ll

ಪ್ರಾಣಾಪಾನ ವ್ಯಾನೋದಾನ ಸಮಾನಂಗಳ ಭೇದಿಸು
ಘನ ದಾರಿದ್ರ್ಯದಿ ನೂಕು ಸುಖವೆ ಸುರರೊಳಗ್ಹಾಕು
ಮುನಿಜನರ ಸಂಗ ಪೊರೆವ ರಂಗವಿಟ್ಠಲ
ನಿನ್ನಯ ಮತ ಮತವೇ ಸನ್ಮತವಯ್ಯ ll 3 ll
***

ಮಧ್ಯಮಾವತಿರಾಗ ಆದಿತಾಳ

ಪಾಲೊಳಗದ್ದು ನೀರೊಳಗದ್ದು ಹರಿ
ನಾ ನಿನ್ನ ನಂಬಿದೆನೋ ||ಪ||

ಜಲಜನಾಭ ನೀನಿಟ್ಟ ತೆರದಲಿ ಇರುವೆನಯ್ಯ ||ಅ.ಪ||

ಸುಖದುಃಖದೊಳಗಿಡು ಸುಕೃತ ದುಷ್ಕೃತ ಮಾಡು
ನಿಖಿಳ ದುಃಖದೊಳೆನ್ನನೋಲ್ಯಾಡಿಸು
ಅಖಿಳ ಖಿಳನೆನಿಸು ಅಭಯ ಭಯವ ಸೂಸು
ಮಕರಕುಂಡಲ ನಿನ್ನ ಮತವೆ ಸನ್ಮತವಯ್ಯ ||೧||

ಜ್ಞಾನಾಜ್ಞಾನದೊಳಗಿಡು ಮಾನಾಪಮಾನವ ಮಾಡು
ಅನಾಥನಾಥರೊಳೆನ್ನ ಅನವರತಾಗಿರಿಸು
ದೀನಾದೀನತೆಯೊಳೆನ್ನ ನೀನೀಡ್ಯಾಡು
ಶ್ರೀನಾಥ ನಿನ್ನಯ ಮತ ಮತವೇ ಸನ್ಮತವಯ್ಯ ||೨||

ವ್ರಾಣಾಪಾನ ವ್ಯಾನೋದಾನ ಸಮಾನಂಗಳ ಭೇದಿಸು
ಘನದಾರಿದ್ರ್ಯದಿ ನೂಕು ಸುಖವೆ ಸುರರೊಳಗ್ಹಾಕು
ಮುನಿಜನರ ಸಂಗ ಪೊರೆವ ರಂಗವಿಠಲ
ನಿನ್ನಯ ಮತ ಮತವೇ ಸನ್ಮತವಯ್ಯ ||೩||
*******