Showing posts with label ವ್ಯರ್ಥ ಕೆಟ್ಟರು ಯಿಂದು ನರಮನುಜರು ಸಾರ್ಥಕ vijaya vittala. Show all posts
Showing posts with label ವ್ಯರ್ಥ ಕೆಟ್ಟರು ಯಿಂದು ನರಮನುಜರು ಸಾರ್ಥಕ vijaya vittala. Show all posts

Thursday, 17 October 2019

ವ್ಯರ್ಥ ಕೆಟ್ಟರು ಯಿಂದು ನರಮನುಜರು ಸಾರ್ಥಕ ankita vijaya vittala

ವಿಜಯದಾಸ
ವ್ಯರ್ಥ ಕೆಟ್ಟರು ಯಿಂದು ನರಮನುಜರು
ಸಾರ್ಥಕ ಮಾಡಿಕೊಳ್ಳರು ಶರೀರವುಳ್ಳವರು ಪ

ಮರುಳಾಟ ಪರ
ಬುದ್ಧಿಯೊಳು ಮುಳುಗಿ ವಿಷಯವ ಭೋಗಿಸಿ
ಮದ್ದು ತಿಂದಂತೆ ಇದ್ದಾದರು ಉದಯದಲಿ
ಎದ್ದು ಕುಳಿತು ಒಮ್ಮೆ ಹರಿಯಂದು ನುಡಿಯದೆ 1

ಹರಿವ ಜಲವ ಮಿಂದು ಹರಿಗೆ ಅರ್ಪಿಸುತೇವೆಂದು
ಬರಿದೆ ಬಾರದೆ ಬಿಂದು ಜಲ ತಂದು
ಅರಘಳಿಗೆ ಅಚ್ಯುತಗೆ ಭಕುತಿಯಲಿ ಅಭಿಷೇಕ
ಯರದು ಯಮಬಾಧೆ ಕಳೆಯಲರಿಯದ ಮಂಕು 2

ಅಡವಿಯಿಂದಲಿ ಒಂದು ತುಳಸಿದಳವನೆ ತಂದು
ತಡಿಯದಲೆ ತಾವರೆದಳನಯನನ
ಕರವ ಮುಗಿದು ಮುಕುತಿ
ಪಡಿಯಲೊಲ್ಲದ ಪರಮ ಪಾಪಿಷ್ಟ ಜನರಯ್ಯಾ3

ಪತ್ರ ಫಲ ಪುಷ್ಪ ತೋಯ ಮುಂದಿರಿಸಿ ನೀಲ
ಗಾತ್ರಗೆ ನೈವೇದ್ಯವೆಂದು ಬಗೆದು
ಸ್ತೋತ್ರವನೆ ಮಾಡಿ ಪ್ರದಕ್ಷಿಣೆ ನಮಸ್ಕಾರ
ನಿತ್ಯ ಒಂದೊಂದು ಮಾಡದೆ ಕರ್ಮಿಗಳು4

ಇಂದಿನ ಹಮ್ಮು ನಾಳಿಗೆಯಿಲ್ಲ ಈ ದೇಹ
ಇಂದು ಬಂದದೆ ನಾಳೆ ಬರಲರಿಯದೂ
ಸಿಂಧುಶಯನ ನಮ್ಮ ವಿಜಯವಿಠ್ಠಲನ ಮನ
ಬಂದಾಗ ನೆನೆದು ಭವವನದಿ ಉತ್ತರಿಸದೆ 5
********