Showing posts with label ವಂದಿಸುವೆನು ರಘುವರನಾ ಸುರವಂದಿತ ಚರಣಾಂಬುಜನ indiresha. Show all posts
Showing posts with label ವಂದಿಸುವೆನು ರಘುವರನಾ ಸುರವಂದಿತ ಚರಣಾಂಬುಜನ indiresha. Show all posts

Monday, 2 August 2021

ವಂದಿಸುವೆನು ರಘುವರನಾ ಸುರವಂದಿತ ಚರಣಾಂಬುಜನ ankita indiresha

ವಂದಿಸುವೆನು ರಘುವರನಾ ಸುರವಂದಿತ ಚರಣಾಂಬುಜನ ಪ


ತಂದೆ ಮಾತಿಗೆ ವನಕ್ಹೋಗಿ ಬಂದವನಾಸುಂದರ ಸಹ ಸೀತೆಯಿಂದ ಅನುಜನಾ ಅ.ಪ


ಮುನಿಯ ಸತಿಯ ಕಾಯ್ದವನ ಋಷಿವನಿತೆಯರ ಪಾಲಿಸಿದವನಾಮನಸಿಜ ರಿಪುಹರ ಚಾಪ ಭಂಜಕನಾ 1

ವಾರಿಧಿ ಸೇತು ಬಂಧಕನಾ ಸೀತಾ -ಚೋರನ ಶಿರವಳಿದವನಾಚಾರು ಸಿಂಹಾಸನವೇರುತ ಸರಯು -ತೀರದ ಅಯೋಧ್ಯಾ ವಿಹಾರ ಸುಂದರನಾ2

ಕೇಸರಿ ಸುತಗೆ ತನುಧನಮಣಿಆಶ್ರಯವನು ಕೊಟ್ಟವನಾಕೋಸಲ ಜನರಿಗೆ ಮೋಕ್ಷವವಿತ್ತವನಾಇಂದಿರೇಶ ಸುಖಾತ್ಮ ನಿರ್ದೋಷ ಪುರುಷನಾ 3

****