Showing posts with label ಒಲಿಯಯ್ಯಾ ರಂಗ ಒಲಿಯಯ್ಯಾನೆಲೆಗಾಣದ prasannavenkata. Show all posts
Showing posts with label ಒಲಿಯಯ್ಯಾ ರಂಗ ಒಲಿಯಯ್ಯಾನೆಲೆಗಾಣದ prasannavenkata. Show all posts

Sunday, 10 November 2019

ಒಲಿಯಯ್ಯಾ ರಂಗ ಒಲಿಯಯ್ಯಾನೆಲೆಗಾಣದ ankita prasannavenkata

by ಪ್ರಸನ್ನವೆಂಕಟದಾಸರು
ಒಲಿಯಯ್ಯಾ ರಂಗ ಒಲಿಯಯ್ಯಾನೆಲೆಗಾಣದ
ಭವಜಲದೊಳು ಮುಳುಗುವೆ ಪ. 

ಮಾಯದ ಕೈಯಲಿ ಮೇಲೆ ಮೇಲೆ ಸುತ್ತಿಆಯಾಸಬಡುತಿದೆ ಪ್ರಾಣದಾತಬಾಯೆತ್ತಿ ಗೋವಿಂದ ಹರಿಯೆನ್ನಲೀಸದುಕಾಯೊ ದಯಾಳು ಕರಿವರದ ಕೃಷ್ಣ 1

ಮನ ನೀರಾನೆಯ ಕಟ್ಟಿನೊಳಗೆ ಸಿಕ್ಕಿಕ್ಷಣ ಕ್ಷಣ ದೈನ್ಯದಿ ಒರಲುತಿದೆತನತನಗೆಳೆದು ದಣಿಸುವ ಇಂದ್ರಿಯ ಜಂತುಮುನಿಸೇವ್ಯ ನಿನ್ನೂಳಿಗಕ್ಕೆ ದೂರಾದೆ ಕೃಷ್ಣ 2

ಬುದ್ಧಿ ತಪ್ಪಿದವಗೆ ಅಬದ್ಧ ನಡೆವವಗೆಶುದ್ಧ ಕಾರಣ ದಿವ್ಯನಾಮವಲ್ಲವೆಉದ್ಧರಿಸು ಬೇಗ ಪ್ರಸನ್ವ್ವೆಂಕಟ ಕೃಷ್ಣತಿದ್ದಿಟ್ಟುಕೊಳ್ಳೊ ನಿನ್ನವಗೆ ನಿರ್ಣಯ ನೀನೆ 3
********