ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಯಯ್ಯ ರಘುನಾಥ ಧೀನಜನೋದ್ದಾರಿ ಪ
ಕೇವಲ ಪತಿತ ಪಾಮರ ನಾನು ಕೇವಲ ಪಾವನ ಮೂರುತಿ ನೀನು ಕೇವಲ ಘನ ಅಪರಾಧಿಯು ನಾನು ದೇವನೀ ಕರುಣಾ ಸಾಗರ 1
ಭಾವ ಭಕ್ತಿಯ ಕೀಲವ ನರಿಯೇ ವಿವೇಕ ಮತಿ ನೀ ನೀಡುವ ಧೊರೆಯೇ ಆವಾಗ ವಿಷಯಾ ಸಕ್ತನು ಹರಿಯೇ ಕಾದ ದೈವನು ನೀನೈ 2
ನತ ನಾದೇ ತರಳನ ಕುಂದಾಲಿಸದಿರು ತಂದೇ ಗುರು ಮಹಿಪತಿ ಪ್ರಭು ನಮೋಯಂದೇ ಶರಣಾಗತ ಸಹಕಾರೀ 3
***