Showing posts with label ಅಹುದಹುದೊ ಹನುಮಂತ ನಿನ್ನ ಮಹಿಮೆ ಅಹಿತರೆದೆಶೂಲ hayavadana. Show all posts
Showing posts with label ಅಹುದಹುದೊ ಹನುಮಂತ ನಿನ್ನ ಮಹಿಮೆ ಅಹಿತರೆದೆಶೂಲ hayavadana. Show all posts

Wednesday, 1 September 2021

ಅಹುದಹುದೊ ಹನುಮಂತ ನಿನ್ನ ಮಹಿಮೆ ಅಹಿತರೆದೆಶೂಲ ankita hayavadana

 ..


ಅಹುದಹುದೊ ಹನುಮಂತ ನಿನ್ನ ಮಹಿಮೆ ಅಹಿತರೆದೆಶೂಲ ನಿಜಪಾಲ ಹರಿಪದಲೋಲ ಪ.


ಬೇಡಿದರಿಗಭಯಹಸ್ತದ ಪ್ರಸಾದವನಿತ್ತುಕೂಡೆ ಮನದಭೀಷ್ಟಗಳ ಕೊಡುವೆಆಡಲನ್ನಳಕೊವಿಯನೊಡದು(?)ರಿಪುಖಳ ವಿ-ಭಾಡನೆಂದೆನಿಸಿ ಸೋದೆಯ ಜನರ ಪೊರೆದೆ 1


ರಾಮಲಕ್ಷ್ಮಣರ ಪೆಗಲಲಿ ಹೊತ್ತುಕೊಂಡು ನಿ-ಸ್ಸೀಮನೆಂದೆನಿಸಿ ಸುಗ್ರೀವನಪ್ರೇಮದಿಂದಲಿ ತಂದು ಅವನಿಗಭಯವಿತ್ತುಭೂಮಿಕಪಿಗಳ ಕೂಡಿ ಸೀತೆಯನರಸಿದೆ2


ಮಂಡೋದರಿಯ ಸುತನ ತುಂಡುಚೂರ್ಣವ ಮಾಡಿತಂಡ ತಂಡದ ಅಂಗಡಿಯ ಸಾಲೆಯಲಿಚಂಡ ಪಾವಕÀನಿಪ್ಪ ಸವುದೆಯೊಳು ಖಳರಹಿಂಡ ಹೋಮಿಸಿ ರಣಾಧ್ವರಕೆ ವೀಕ್ಷಿತನಾದೆ3


ಸ್ವಾಮಿಕಾರ್ಯದಿ ದುರಂಧರನೆನಿಸಿ ನಿನ್ನ ಪದಪ್ರೇಮ ವರ್ಧಿಪುವುದೇನು ಚಿತ್ರತಾಮಸಜನರ ಸೀಮೆಯೊಳು ಪೂಜೆಯಗೊಂಬಧೀಮಂತ ನಿನಗಲ್ಲದುಳಿದವರಿಗುಂಟೆ 4


ಗಿರಿವನವ ತಂದು ವಾನÀರ ಸಮೂಹವ ರಕ್ಷಿಸಿದೆದುರುಳ ರಾವಣನ ನೀನೆ ಗುದ್ದಿ ಧರೆಯೊಳಗೆಸಿರಿರಾಮನ ಪಂಥ ಗೆಲಲೆಂದುತಿರುಗಿದೆಯೆಲೊ ಹಯವದನನ ಮೋಹದ ಬಂಟ5

***