..
ಅಹುದಹುದೊ ಹನುಮಂತ ನಿನ್ನ ಮಹಿಮೆ ಅಹಿತರೆದೆಶೂಲ ನಿಜಪಾಲ ಹರಿಪದಲೋಲ ಪ.
ಬೇಡಿದರಿಗಭಯಹಸ್ತದ ಪ್ರಸಾದವನಿತ್ತುಕೂಡೆ ಮನದಭೀಷ್ಟಗಳ ಕೊಡುವೆಆಡಲನ್ನಳಕೊವಿಯನೊಡದು(?)ರಿಪುಖಳ ವಿ-ಭಾಡನೆಂದೆನಿಸಿ ಸೋದೆಯ ಜನರ ಪೊರೆದೆ 1
ರಾಮಲಕ್ಷ್ಮಣರ ಪೆಗಲಲಿ ಹೊತ್ತುಕೊಂಡು ನಿ-ಸ್ಸೀಮನೆಂದೆನಿಸಿ ಸುಗ್ರೀವನಪ್ರೇಮದಿಂದಲಿ ತಂದು ಅವನಿಗಭಯವಿತ್ತುಭೂಮಿಕಪಿಗಳ ಕೂಡಿ ಸೀತೆಯನರಸಿದೆ2
ಮಂಡೋದರಿಯ ಸುತನ ತುಂಡುಚೂರ್ಣವ ಮಾಡಿತಂಡ ತಂಡದ ಅಂಗಡಿಯ ಸಾಲೆಯಲಿಚಂಡ ಪಾವಕÀನಿಪ್ಪ ಸವುದೆಯೊಳು ಖಳರಹಿಂಡ ಹೋಮಿಸಿ ರಣಾಧ್ವರಕೆ ವೀಕ್ಷಿತನಾದೆ3
ಸ್ವಾಮಿಕಾರ್ಯದಿ ದುರಂಧರನೆನಿಸಿ ನಿನ್ನ ಪದಪ್ರೇಮ ವರ್ಧಿಪುವುದೇನು ಚಿತ್ರತಾಮಸಜನರ ಸೀಮೆಯೊಳು ಪೂಜೆಯಗೊಂಬಧೀಮಂತ ನಿನಗಲ್ಲದುಳಿದವರಿಗುಂಟೆ 4
ಗಿರಿವನವ ತಂದು ವಾನÀರ ಸಮೂಹವ ರಕ್ಷಿಸಿದೆದುರುಳ ರಾವಣನ ನೀನೆ ಗುದ್ದಿ ಧರೆಯೊಳಗೆಸಿರಿರಾಮನ ಪಂಥ ಗೆಲಲೆಂದುತಿರುಗಿದೆಯೆಲೊ ಹಯವದನನ ಮೋಹದ ಬಂಟ5
***
No comments:
Post a Comment