Wednesday 1 September 2021

ನೀನೇ ಘನ್ನ ಪಾವನ್ನ ಗುರುವರ ankita gurujagannatha vittala

 ..

ನೀನೇ ಘನ್ನ ಪಾವನ್ನ ಗುರುವರ ಪ


ನೀನೇ ಘನ್ನ ಪಾವನ್ನ ಗುರುವರ

ನಾನು ಬೇಡಿದೆ ಸಾನುರಾಗದಿ

ದಾನಿ ಅದಕನುಮಾನ ಮಾಡದೆ

ನಾನಭೀಷ್ಟೆಯ ನೀನು ಕೊಡೋದಕೆ ಅ.ಪ


ನಿನ್ನ ನಂಬಿದೆ ನಾನು ಯತಿಕುಲಾಗ್ರಣಿ

ರನ್ನ ಪಾಲಿಸೊ ನೀನು

ಎನ್ನ ನುಡಿಗಳ ಮನ್ನಿಸೀ ಪೊರಿ

ಅನ್ಯನಲ್ಲವೊ ನಿನ್ನ ತನುಜನು

ಧನ್ಯನಾಗುವದನ್ನು ಸಲಿಸೋ

ಘನ್ನ ಮಹಿಮಾಪನ್ನ ಪಾಲಕ 1


ಆರ್ತಜನಮಂದಾರಾ ಮೋಕ್ಷಾದಿ ಸತ್ಪುರು -

ಷಾರ್ಥ ಮಹÀದಾತಾರ

ತೀರ್ಥಪದಯುಗ ಪಾರ್ಥಸೂತಗೆ

ವಾರ್ತೆ ತಿಳಿಸಿ ಆರ್ತಸತಿಯಾ

ಅರ್ತಿ ಕಳೆದಿಹÀ ಕೀರ್ತಿ ಕೇಳಿ

ಪ್ರಾರ್ಥಿಪೆನೊ ಕೃತಾರ್ಥನೆನಿಸೋ 2


ಮಾತಾ ಪಿತ ಗುರುದೂತಾ ಎನಗೆ ಭಾವಿ ವಿ -

ಧಾತಾ ಭ್ರಾತ ಸುಪೋತ

ಭೂತಪತಿ ಸುರಯೂಥ ವಂದ್ಯನೆ

ದಾತ ಗುರುಜಗನ್ನಾಥ ವಿಠಲನ

ದೂತ ಮನ್ಮನೋಜಾತ ಕಾಮಿತ

ದಾತಭೀಷ್ಟೆಯ ವ್ರಾತ ಸಲಿಸೋ 3

***


No comments:

Post a Comment