Showing posts with label ದಯಮಾಡಿ ಬಿಡಮ್ಮ ಮಾರಮ್ಮ karivarada vittala. Show all posts
Showing posts with label ದಯಮಾಡಿ ಬಿಡಮ್ಮ ಮಾರಮ್ಮ karivarada vittala. Show all posts

Thursday 18 February 2021

ದಯಮಾಡಿ ಬಿಡಮ್ಮ ಮಾರಮ್ಮ ankita karivarada vittala

ಕೇದಾರ ಗೌಳ ರಾಗ 

ದಯ ಮಾಡಿ ಬಿಡಮ್ಮ ಮಾರಮ್ಮ

ಯೇವೂರಮ್ಮ ಬಂದಿರುವೋ ಅಮ್ಮ ||ಪ ||

 ದಯ ಮಾಡಿಬಿಡಮ್ಮ |ನಯ ದಿಂದ

ಬೇಡುವೆ ವೆಮ್ಮ

ಭಯಹಾರಿ ನರಹರಿ ಚರಣ ಸೇವಕರಮ್ಮನೇ ||ಅ ಪ ||


ನಿನ್ನದಯಕೆ ಪಾತ್ರರೆ |ಕೇಳಮ್ಮ       ನೀಯಿನ್ನು 

ನೀ ಕಾಡುವದೇ |ನಿನ್ನಾಣೆ ಸೆಟೆ ಯಲ್ಲ ಚೆನ್ನಕೇಶವಬಲ್ಲ ||1 ||


ಕೋಪಿಸೆ  ನೀನು ಯೀಗ ಯನ್ನನ್ನು ಬೇಗ ಕಾಪಾಡುವರ್ಯರೀಗ  |ಶ್ರೀಪತಿ ಸತಿಯಿಂದು ನಾಪಾದ ದಾಸನೆಂದು ||  2||


ನಿನ್ನ ಭಯಕೆ ಸರ್ವರೂ ಯೀ ವೋರನ್ನೇ |ಬನ್ನ ಬಡುಕ ಬಿಟ್ಟರು |ಅನ್ಯಾಯ ಮಾಡದೆ |ಇನ್ನು ನೀ ಕಾಪಾಡು|| 3||


ದಾಸರ ದಾಸನೆಂದುಬೇಡುವೆನೆಂದು

ಪೋಷಿಸು  ನೀನೇ  ಇಂದು |ವಾಸುದೇವನಾರಾಣಿ |ಪರಮಕಲ್ಯಾಣಿ ||4||


ದ್ರಿಷ್ಟಿಯಿಂದಲಿ ನೋಡದೆ |ಸುಮ್ಮನೆ ನೀನು ಬಿಟ್ಟು ಪೊಗಮ್ಮ  ಯಿರಾದೇ

ಸೃಷ್ಟಿಷ ಕರಿವರದವಿಠ್ಠಲನ್ನ |ಅರಗಿಣಿಯೇ ||5||

*****


ವಿ.ಸೂ |ಇಲ್ಲಿ ದಾಸರು ಅಂದಿನಕಾಲದ ಆಡುಭಾಷೆಯನ್ನು ಬಳೆಸಿದ್ದಾರೆ.

ಮಂಗಳವಾರದ ದುರ್ಗಾ ಪ್ರಾರ್ಥನೆ

      ||  ಶ್ರೀ ಮದ್ವೇಶಾರ್ಪಣ ಮಸ್ತು ||

ಶ್ರೀ ವಿಠ್ಠಲಪ್ರಸೀದ

ಶ್ರೀ ದೊಡ್ಡಬಳ್ಳಾಪುರ                    ಶ್ರೀ ರಾಮದಾಸರು  ಈಗಿನ  ಕರೋನಾ  ಮಾರಿಯಂತೆ ಅಂದಿನ ದಿನಗಳಲ್ಲಿ ಆವರಿಸಿದ್ದ ಪ್ಲೇಗ್ ನಿಂದಾಗಿ ತಮ್ಮ ಸಂಸಾರವನ್ನು ಕಳೆದುಕೊಂಡಿದ್ದರು. ಶ್ರೀ ಮುದ್ದು ಮೋಹನ ವಿಠ್ಠಲಾoಕಿತಾರಾದ ಶ್ರೀ ರಾಘವೇಂದ್ರ ದಾಸರು ರಾಮದಾಸರ ಸಹೋದರ            ಶ್ರೀ ವೆಂಕಟದಾಸರ (ಜ್ಞಾನ ದಾಯಕ  ವಿಠ್ಠಲ ದಾಸರು ) ಅಂಗಾoಗಗಳು   ಪ್ಲೇಗ್  ತಗಲಿ ನಿತ್ರಾಣ ರಾಗಿದ್ದಾಗ ತಲೆಯ ಬಳಿ ಕುಳಿತು ದೇವರ ನಾಮಗಳನ್ನು   ಹಾಡುತ್ತಿದ್ದರು, ಗೋಪಾಲ ದಾಸರು ಜಗನ್ನಾಥ ದಾಸರಿಗೆ ಆಯುರ್ದಾನ ಮಾಡಿದಂತೆ. ಕೆಲವೇ ದಿನಗಳಲ್ಲಿ ವೆಂಕಟರಾಯದಾಸರು ಗುಣಮುಖರಾದರು .                   ಶ್ರೀ ರಾಮದಾಸರು ಕೃತಿಯೊಂದನ್ನು ರಚಿಸಿ ದುರ್ಗಾದೇವಿಯನ್ನು, ಕೇದಾರ ಗೌಳ ರಾಗದಲ್ಲಿ  ಪ್ರಾರ್ಥಿಸಿದ್ದಾರೆ.

******