Showing posts with label ಯಾಕೆಲೋ ರಂಗ ನಿನ್ನರಸಿಯೊಳು ಮುನಿದಿರುವೆ mahipati. Show all posts
Showing posts with label ಯಾಕೆಲೋ ರಂಗ ನಿನ್ನರಸಿಯೊಳು ಮುನಿದಿರುವೆ mahipati. Show all posts

Monday, 24 May 2021

ಯಾಕೆಲೋ ರಂಗ ನಿನ್ನರಸಿಯೊಳು ಮುನಿದಿರುವೆ ankita mahipati

 ರಾಗ – : ತಾಳ – 


ಯಾಕೆಲೋ ರಂಗ l ನಿನ್ನರಸಿಯೊಳು ಮುನಿದಿರುವೆ l

ಲೋಕವೀರೇಳು ರಕ್ಷಿಪ ಮುದ್ದು ರಂಗಾ ll ಪ ll


ನಾಲ್ಕನೆಯ ಅವತಾರದಲಿ ಉಗ್ರವಾಗಿರೆ l

ಆ ಕಮಲಜ ಮುಖ್ಯ ಬೆದರುತಿರಲು l

ಲಕುಮಿ ತಾಕಂಡು ತೊಡೆಮೇಲೆ ಕುಳ್ಳಿರಲು l

ಈ ಲೋಕದೊಳು ಶಾಂತನೆನಿಸಿದಳೊ ನಿನ್ನರಸಿ ll 1 ll


ಗುಂಜೆಯಮಾಲೆ ಕೊರಳಿಗೆ ಹಾಕಿ ಗೋವಳರ l

ಎಂಜಲ ತಿನುತ ಗೋಗಳ ಕಾಯುತಿರಲು l

ಕಂಜನಯನೆಯು ಬಂದು ಸಕಲ ಶಿರಿಯಿಂದಲಿ l

ರಂಜಿಸಿದಳೊ ಜಗದೊಳಗೆ ನಿನ್ನ ಅರಸಿ ll 2 ll


ಇಂತರಿದು ನಾನಾಪರಿಯಿಂದ ನಿನ್ನ ಮೇಲೆ l

ಸಂತತ ಉಪಕಾರ ಮಾಡಿರೆ ನೀನು l

ಕಂತುಮಾತೆಯ ತಪ್ಪು ನೋಡುವರೇನೋ l ಆ-

ನಂತನೇ ಏಳು ಮಹಿಪತಿನಂದನೊಡೆಯಾ ll 3 ll

***