Showing posts with label ಸಚ್ಚಿದಾನಂದಮಯಗೆಚ್ಚರಿಕೆ ನಿಶ್ಚಯದ ನಿರುಪಮಂಗೆಚ್ಚರಿಕೆ devapura lakshmikanta. Show all posts
Showing posts with label ಸಚ್ಚಿದಾನಂದಮಯಗೆಚ್ಚರಿಕೆ ನಿಶ್ಚಯದ ನಿರುಪಮಂಗೆಚ್ಚರಿಕೆ devapura lakshmikanta. Show all posts

Monday 2 August 2021

ಸಚ್ಚಿದಾನಂದಮಯಗೆಚ್ಚರಿಕೆ ನಿಶ್ಚಯದ ನಿರುಪಮಂಗೆಚ್ಚರಿಕೆ ankita devapura lakshmikanta

 ಸಚ್ಚಿದಾನಂದಮಯಗೆಚ್ಚರಿಕೆ ಪ


ನಿಶ್ಚಯದ ನಿರುಪಮಂಗೆಚ್ಚರಿಕೆ

ಅಚ್ಚರಿಯ ಸಚ್ಚಿತ್ರಂಗೆಚ್ಚರಿಕೆ ಅ.ಪ


ಕಾಂತೆಯರ ಮನೆಗೆ ಶ್ರೀಕಾಂತ ಪೊರಮಡುತಿಹನು

ಕಾಂತೆಯರು ಕಟ್ಟುಮೆಟ್ಟದವೊಲೆಚ್ಚರಿಕೆ 1


ಸಂಚಿತಾಭರಣಗಳ ಮಿಂಚುಗುರುಚರಣಗಳ

ಕುಂಚ ಕಾಳಂಜಿಯವರೆಲ್ಲವೆಚ್ಚರಿಕೆ 2


ನೀಡೆಸೆವ ಸೆಳ್ಳುಗುರು ಮೂಡುತಿಹ ಮೊಲೆಹೊಗರು

ಆಡಿಸುವ ಹಡಪದವರೀಗ ಎಚ್ಚರಿಕೆ 3


ಬಿಂಬಾಧರಂ ಪೊಳೆಯೆ ಕಂಬುಕಂಠವು ಹೊಳೆಯೆ

ಪೊಂಬಾಳ ದೀವಿಗೆಯ ಜನರು ಎಚ್ಚರಿಕೆ 4


ಚೆನ್ನಸಿರಿಯರಮನೆಯ ಚಿನ್ನವಾಗಿಲ ಕೊನೆಯ

ರನ್ನದೋರಣ ತಡಿಯವರೆಚ್ಚರಿಕೆ 5


ಇಂದಿರಾದೇವಿಯರ ಮಂದಿರದ ಬೀದಿಯೊಳು

ಸಂದಣಿಯಲತಿ ಜತನವಿರಲಿ ಯೆಚ್ಚರಿಕೆ 6


ದೇವಿಯರ ಮನೆಗೆ ವಿವಾಹ ತಾಬೇಡಿ ಬಂದ

ದೇವಪುರ ಲಕ್ಷ್ಮೀಶಗೆಚ್ಚರಿಕೆ 7

****