Showing posts with label ದಾಸರಿಗುಂಟೆ ಭಯಶೋಕ jagannatha vittala. Show all posts
Showing posts with label ದಾಸರಿಗುಂಟೆ ಭಯಶೋಕ jagannatha vittala. Show all posts

Saturday, 14 December 2019

ದಾಸರಿಗುಂಟೆ ಭಯಶೋಕ ankita jagannatha vittala

by ಜಗನ್ನಾಥದಾಸರು
ರಾಗ- ನಾದನಾಮಕ್ರಿಯೆ (ಕಾಲಿಂಗಡಾ) ಅಟತಾಳ( ಕಹರವಾ)

ದಾಸರಿಗುಂಟೇ ಭಯ ಶೋಕ , ಹರಿ- ||ಪ||

ದಾಸರಿಗುಂಟೇ ಭಯ ಶೋಕ
ವಾಸುದೇವನ ಸದಾ ಸ್ಮರಿಸುವ ಹರಿ-
ದಾಸರಿಗುಂಟೇ ಭಯ ಶೋಕ ||ಅ.ಪ||

ಕಾಮಧೇನು ವರ ಕಲ್ಪವೃಕ್ಷ ಚಿಂ-
ತಾಮಣಿ ಕೈಸೇರಿದಕಿಂತ
ನಾಮತ್ರಯದಿಂದಪ್ಪುದು ಸುಖವು ಸು-
ಧಾಮನೆ ಸಾಕ್ಷಿದಕೆಂಬ ಹರಿ ||೧||

ರಾಮಚಂದ್ರ ಶಬರಿ ತಿಂದೆಂಜಲ-
ಜಾಮಿಳ ಮಾಡ್ದ ಕುಕರ್ಮಗಳ
ಧೂಮಕೇತು ತಾ ಭುಂಜಿಸುವಂದದಿ
ಮೇಧ್ಯಾಮೇಧ್ಯ ಕೈಗೊಂಬನೆಂಬ ಹರಿ ||೨||

ನೇಮ ಮಂತ್ರ ಜಪ ದೇವತಾರ್ಚನ ಸ-
ಕಾಮುಕವಾಗಲು ತ್ಯಜಿಸುತಲಿ
ಧೀಮಂತರಾಗತಿಪ್ರಿಯವಾಗಲು ಬಹು
ತಾಮಸ ಕರ್ಮವ ಮಾಳ್ಪುದೆಂಬ ಹರಿ ||೩||

ಏನು ಮಾಡಿದಪರಾಧವ ಕ್ಷಮಿಸುವ
ಏನು ಕೊಟ್ಟುದನು ಕೈಗೊಂಬ
ಏನು ಬೇಡಿದಿಷ್ಟಾರ್ಥವ ಕೊಡುವ ದ-
ಯಾನಿಧಿ ಅನುಪಮನೆಂಬ ಹರಿ ||೪||

ಪ್ರಹ್ಲಾದವರದ ಪ್ರಕಟನಾಗದಲೆ
ಎಲ್ಲರೊಳಿಪ್ಪನು ಪ್ರತಿದಿನದಿ
ಬಲ್ಲಿದವರಿಗೆ ಬಲ್ಲಿದ ಜಗನ್ನಾಥ
ವಿಠ್ಠಲ ವಿಶ್ವವ್ಯಾಪ್ತನೆಂಬ ಹರಿ ||೫||
***


pallavi

dAsariguNTE bhaya shOka hari

anupallavi

dAsariguNTE bhaya shOka vAsudEvana sadA smarisuva haridAsariguNTE bhaya shOka

caraNam 1

kAmadhEnu vara kalpavrakSa ccintAmaNi kai sEridakinta
nAmatrayadindappudu sukhavu sudhAmane sAkSidakemba hari

caraNam 2

rAmacandra shabari tindejala jAmiLa mADda kukarmagaLa
dhUdukEtu tA gunjisuvandadi mEdhyAmEdhya kaigombanemba hari

caraNam 3

nEma mantra japa dEvatArcana sakhAmukavAgalu tyajisali
dhImantarAgati priyavAgalu bahu tAmasa karmava mALpudemba hari

caraNam 4

Enu mADidaparAdhava kSamisuva Enu koTTudanu kaigomba
Enu bEDidiSTArthava koDuva dayAnidhi anupamanemba hari

caraNam 5

prahlAda varada prakaTanAgadale ellaroLippanu prati dinadi
balladavige ballida jagannAtha viThala vishva vyAptanemba hari
***

ದಾಸರಿಗುಂಟೆ ಭಯಶೋಕ ಪ

ವಾಸುದೇವನ ಸದಾ ಸ್ಮರಿಸುವ ಹರಿ
ದಾಸರಿಗುಂಟೆ ಭಯಶೋಕ ಅ.ಪ.

ಕಾಮಧೇನು ವರ ಕಲ್ಪವೃಕ್ಷ ಚಿಂ
ತಾಮಣಿ ಕೈ ಸೇರಿದಕಿಂತ
ನಾಮತ್ರಯದಿಂದಪ್ಪುದು ಸುಖವು ಸು
ಧಾಮನೆ ಸಾಕ್ಷಿದಕೆಂಬ ಹರಿ 1

ರಾಮಚಂದ್ರ ಶಬರಿ ತಿಂದೆಂಜಲ
ಜಾಮಿಳ ಮಾಡ್ದ ಕುಕರ್ಮಗಳ
ಧೂಮಕೇತು ತಾ ಭುಂಜಿಸುವಂದದಿ
ಮೇಧ್ಯಾಮೇಧ್ಯ ಕೈಗೊಂಬನೆಂಬ ಹರಿ 2

ನೇಮ ಮಂತ್ರ ಜಪ ದೇವತಾರ್ಚನ ಸ
ಕಾಮುಕವಾಗಲು ತ್ಯಜಿಸುತಲಿ
ಧೀಮಂತರಾಗತಿಪ್ರಿಯವಾಗಲು ಬಹು
ತಾಮಸ ಕರ್ಮವ ಮಾಳ್ಪುವೆಂಬ ಹರಿ 3

ಏನು ಮಾಡಿದಪರಾಧವ ಕ್ಷಮಿಸುವ
ಏನು ಕೊಟ್ಟುದನು ಕೈಗೊಂಬ
ಏನು ಬೇಡಿದಿಷ್ಟಾರ್ಥವ ಕೊಡುವ ದ
ಯಾನಿಧಿ ಅನುಪಮನೆಂಬ ಹರಿ 4

ಪ್ರಹ್ಲಾದವರದ ಪ್ರಕಟನಾಗದಲೆ
ಎಲ್ಲರೊಳಿಪ್ಪನು ಪ್ರತಿದಿನದಿ
ಬಲ್ಲಿದವರಿಗೆ ಬಲ್ಲದ ಜಗನ್ನಾಥ
ವಿಠ್ಠಲ ವಿಶ್ವವ್ಯಾಪಕನೆಂಬ ಹರಿ 5
*******