ರಾಗ : ಹಂಸಾನಂದೀ ತಾಳ : ಆದಿ
ನಾನಾ ಯೋನಿಗಳಲ್ಲಿ ।
ನಾನಾ ಜನ್ಮವೆತ್ತಿ ।
ನಾನೂ ತಿರುಗಲಾರೆನೊ ।। ಪಲ್ಲವಿ ।।
ಶ್ರೀನಿವಾಸನೆ ನಿನ್ನ ಸೇರಿದ । ಮ್ಯಾಲು ।
ದಾಸೀನ ಮಾಡುವರೇನೋ ಗೋವಿಂದ ।। ಅ ಪ ।।
ತಂದೆಯ ಉದರದೊಳ್
ತ್ರೈಮಾಸವು -
ಶುಕ್ರ ಇಂದ್ರಿಯನಾಗಿದ್ದೆನೋ ।
ಅಂದಾದಿ ಜನನಿಯ । ಜಠ ।
ರಾದಿ ಶೋಣಿತದಿಂದ
ಪಿಂಡವು ಆದೇನೊ ।
ಕುಂದಾದೆ ಮಾಸ
ನಾಲ್ಕಾದ ಪಲ್ಲವ
ಯುವದಿಂದ ಬೆಳೆಯುತಲಿದ್ದೆನೊ ।
ಸಂಧಿಸೆ ಸಪ್ತ ಮಾಸವು ।
ಗುಲಗೋ ।
ತ್ರದಿ ಬಂದಿದ್ದೆಣಿಸುತುದ್ದೇನೋ ।। ಚರಣ ।।
ನರದ ಸಂಕೋಲೆ
ಮಾಂಸದ ಚೀಲ
ಬೆಲೆಯೊಳು ನರಳಿ
ಕೋಟಲೆಗೊಂಡೆನೋ ।
ಪರಿಪರಿಯಲಿ ಬಂದ
ಪಾಪ ಪುಣ್ಯಗಳ
ಪಿರಿದು ಚಿಂತಿಸುತ್ತಿದ್ದೆನೋ ।
ನೆರೆ ಅಷ್ಟ ಮಾಸದೊಳ್
ರಾಶಿ ತೋಷದಿಂದ
ಕರೆ ಕಷ್ಟಗೊಳುತ್ತಿದ್ದೆನೋ ।
ಇರುತಿರೆ ನವ ಮಾಸ ಕಳಿಯೇ
ವಾಯುವಿನಿಂದ ಧರೆಗೆ
ಪತನವಾದೆನೋ ಗೋವಿಂದ ।। ಚರಣ ।।
ಮಾಂಸ ಮಲದಿ
ಮೊರದಿ ಮಲಗಿ
ನೊಣನ ಘಾಸಿ
ಪಡುತಲಿದ್ದೆನೋ ।
ಹೇಸಾದ ಹಸಿದು
ಬೆರಳು ಬಾಯೊಳಗಿಟ್ಟು
ತೋಷಪೆ ದುಃಖಿಪೆನೋ ।
ತೋಷಿಸಿ ಬಾಲೆ
ದುರ್ಬಲೆನ್ನುತ್ತಾ
ಲೋಹ ಕಾಶಿ ಹಚ್ಚುತಿಹಳೋ ।
ಈಸು ಭವಣಿಯ ಗರ್ಭದಿ
ಜನ್ಮಗಳ ನಾಸಾರವೆತ್ತಿದೆನೋ ।। ಚರಣ ।।
ಬಾಲ ತನದಿ ಬಲು ವಿದದಾಟವ
ತೋರಿ ಮೇಲಾಗಿರುತ್ತಿದ್ದೆನೋ ।
ಲೇಲೆಯಿಂದಲಿ ಪುಳು ಮೃಗ
ಪಕ್ಷಿ ಮಾರ್ಜಾಲ ಘಾತಕನಾಗಿದ್ದೇನೋ ।
ಖೂಳ ತಾನರಿದು ದುಷ್ಕೃತ್ಯವ
ಮಾಡಿಯೇ ದಾಳಿಗೀಡಾಗಿದ್ದೆನೋ ।
ಹೇಳಬಾರದ ಪಾಪವ ಮಾಡಿ
ನರಕದ ಪಾಳೆಯ ಕ್ರೀಡಾದೆನೋ ।। ಚರಣ ।।
ಹೀಗಿರುತಿರೆ ಮುಂಜಿ
ಮದುವೆಗಳೆಲ್ಲವೂ
ಆಗಿ ಬಾಳುತಲಿದ್ದೆನೋ ।
ಸೋಗಿಗಣ್ಣಿನ ಸುದತಿಯ ಕಂಡು
ಜ್ಞಾನವ ನೀಗಿ
ಬಾಳುತ್ತಲಿದ್ದೆನೋ ।
ರೋಗವಿಲ್ಲದೆ ನರಳುವನಂತೆ
ಕಾಮದ ಬ್ಯಾಗೆಯೊಳ್
ಬೆಂಡಾದೆನೋ ।
ಆಗಲು ಪುತ್ರ ಬಾಂಧವಿರಿಗೋಸುಗ
ಭವ ಸಾಗರದೊಳು ಬಿದ್ದೆನೋ ।। ಚರಣ ।।
ಬಾಲ್ಯ ಯೌವನವಳಿದು
ವಾರ್ಧಿಕ್ಯೆವಡಿಸೆ
ಬಹು ಬೀಳಾಗಿರುತ್ತಿದ್ದೆನೊ ।
ಕಾಲು ಕೈಗಳು ಕುಗ್ಗಿ ಕಂಗಾಳು
ಕ್ಷಯವೇರಿ ಬೀಳುತೇಳುತಲಿದ್ದೆನೋ ।
ನಾಲಿಗೆ ಉಡುಗಿ ನರಗಳೆಲ್ಲ
ಸಡಲೇರಿ ಬಾಳಾಗಿರುತ್ತಿದ್ದೆನೊ ।
ಹಾಲು ಕೋಟಿಗೆ ತಲೆಯನು ಕೊಟ್ಟು
ಕಾದುವ ಮೂರಾನಂದದಿ ಇದ್ದೆನೊ ।। ಚರಣ ।।
ಪುಟ್ಟಿ ಸಾಕಿದ ಸುತ
ಸುದತಿಯರಿಗೆ
ಸಹ ನಿಷ್ಠವೆನಿಸಿಕೊಂಡೆನು ।
ಬಿಟ್ಟು ಪ್ರಾಣವ ಕಡೆಗಾಗಲು
ಶವವೆಂದು ಮುಟ್ಟಾರೆನಿಸಿಕೊಂಡೆನೊ ।
ಅಟ್ಟಾಡವಿಯೊಳಿಟ್ಟು
ಕಾಗೆ ದೇಹವ
ಕೊಟ್ಟು ತಿನಿಸುತ್ತಿದ್ದಾರೋ ।
ಕೆಟ್ಟ ಪಾಶದೊಳೆಮನಾಳುಗಳೆನ್ನನು
ಅಟ್ಟ ಸೆಳೆಯುತ್ತಿದ್ದರೋ ।। ಚರಣ ।।
ಹಾದಿಯೊಳ್ ಪಿಡಿಯೆ
ವೈತರಣಿಯೊಳ್
ಮುಳುಗಿಸೆ ವೇದನ
ಪಡುತ್ತಿದ್ದೇನೊ ।
ಕಾದ ಕಾವಲಿ ಉಕ್ಕಿನ ಕಂಬ
ಕೀವಿನ ಸ್ವೇದ
ಕುಂದದಿ ಬಿದ್ದೆನೊ ।
ಭೇದವಿಲ್ಲದ ಪರ್ವತ
ಗುಹ್ಯ ಮೊದಲಾದ
ಛೇದನಿ ಬಿಡುತ್ತಿದ್ದೆನೊ ।
ವಾದಿಸಿ ಹಿರಿಯರೊಳ್
ಮೀರಿ ನಡೆದು
ಯಮಬಾಧೆಗೆ
ಗುರಿಯಾದೆನೋ ।। ಚರಣ ।।
ಎಷ್ಟೆಂದು ಕಳೆಯಬಹುದು
ನರಕದೊಳಿಂತು
ಕಷ್ಟ ಪಡುತ್ತಲಿದ್ದೆನೋ ।
ದಿಟ್ಟ ಮೂರುತಿ ನಿಮ್ಮ
ಪಾದವ ಸ್ಮರಿಸದೆ
ಇಷ್ಟು ಜನ್ಮದಿ ಬಂದೆನೋ ।
ಇಷ್ಟರಮ್ಯಾಲಿನ್ನು
ನೀನಾದರೂ ಕೈಯ
ಬಿಟ್ಟಿರುಳಿಯಲಾರೆನೋ ।
ಸೃಷ್ಟಿಯೊಳ್ ತುರುಗಿರಿ ವಾಸ
ಅಚಲಾನಂದ ವಿಠಲ ಸಲಹೋ ಯೆನ್ನ ।।
****
ಶ್ರೀ ಅಚಲಾನಂದದಾಸರು ಜೀವನು ಪಡುವ ಕಷ್ಟಗಳನ್ನು ಕಣ್ಣಿನೆ ಕಣ್ಣಿಗೆ ಕಾಣುವಂತೆ ಅತ್ಯಂತ ಮನೋಜ್ಞವಾಗಿಯೂ, ಸರಲ ಸುಂದರವಾಗಿಯೂ ವರ್ಣಿಸಿ, ಪ್ರತಿಯೊಬ್ಬ ಜೀವಿಯನ್ನು ಎಚ್ಚ್ಚರಿಸಿದ್ದಾರೆ.
***
ನಾನಾ ಯೋನಿಗಳೊಳು ಹೀನಜನ್ಮದಿ ಬಂದು
ನಾನು ತಿರುಗಲಾರೆನೊ ಗೋಪಾಲ ಪ.
ಶ್ರೀನಿವಾಸ ನಿನ್ನ ಸೇರಿದ ಬಳಿಕ
ಉದಾಸೀನ ಮಾಳ್ಪರೇನೋ ಗೋಪಾಲ ಅ.ಪ.
ತಂದೆಯ ಉದರದಿ ತ್ರೈಮಾಸವು ಶುಕ್ಲ
ಇಂದ್ರಿಯದೊಳಿದ್ದೆನೊ ಗೋಪಾಲ
ಅಂದಾಗ ಜನನಿಯ ಜಠರದಿ ಶೋಣಿತದಿಂದ
ಪಿಂಡವಾದೆನೊ ಗೋಪಾಲ
ಕುಂದದೆ ಮಾಸ ನಾಲ್ಕಯಿದಾಗಲ ವಯವಂಗಳಿಂದ
ಬೆಳೆವುತಿದ್ದೆನೊ ಗೋಪಾಲ 1
ನರದ ಸಂಕೋಲೆ ಮಾಸುಚೀಲದ ಬಲೆಯೊಳು
ನರಳಿ ಕೋಟಲೆಗೊಂಡೆನೊ ಗೋಪಾಲ
ಪರಿಪರಿಯಲಿ ಇಂತು ಪಾಪ ಪುಣ್ಯಗಳೆಂತು
ಹಿರಿದು ಚಿಂತಿಸಿದೆನೊ ಗೋಪಾಲ
ನೆರೆ ಅಷ್ಟ ಮಾಸವು ಕ್ಷೀರ ಶೀತೋಷ್ಣದಿ ಕರೆ
ಕಷ್ಟಬಡುತಿದ್ದೆನೊ ಗೋಪಾಲ
ಇರುತಿರೆ ನವಮಾಸ ಘಳಿಗೆ ವಾಯು
ಸಂದ ಧರೆಗೆ ಪತನವಾದೆನೊ ಗೋಪಾಲ2
ಮಾಸು ಮಲವು ಸಹ ಮೊರದಿ ಮಲಗಿ ನೊಣದ
ಘಾಸಿಯೊಳೊರಲುವೆನೊ ಗೋಪಾಲ
ಹೇಸದೆ ಹಸಿದು ಬೆರಳು ಬಾಯೊಳಗಿಟ್ಟು
ಘಾಸಿಸಿ ದುಃಖಿಪೆನೊ ಗೋಪಾಲ
ಪುಟ್ಟಿಸಲು ಮಾತೆ ದುರ್ಬಲವೆನುತಲಿ
ಬ್ಯಾಸತ್ತು ಒರಲುವೆನೊ ಗೋಪಾಲ
ಈಸು ಬವಣೆಯಿಂದಾ ನರ್ಕದ ಒಳಗಿಂದ
ಶ್ವಾಸ ಎತ್ತಿದೆನೊ ಗೋಪಾಲ 3
ಬಾಲತನದಿ ಬಹುವಿಧದಾಟವ ತೋರಿ
ಮೇಲನರಿಯದಿದ್ದೆನೊ ಗೋಪಾಲ
ಲೀಲೆಯೊಳು ತುರುವಿಂಡು ಮೃಗಪಕ್ಷಿ
ಮಾರ್ಜಾಲ ಘಾತಕನಾಗಿದ್ದೆನೊ ಗೋಪಾಲ
ಖೂಳತನದಿ ದುಷ್ಕøತ್ಯವ ಮಾಡಲು
ಕೂಳಿಗೀಡಾಗಿದ್ದೆನೊ ಗೋಪಾಲ
ಹೇಳಬಾರದ ಪಾಪವ ಮಾಡಿ ನರಕದ
ಪಾಳೆಯಕೀಡಾದೆನೊ ಗೋಪಾಲ 4
ಹೀಗಿರುತಿರೆ ಮುಂಜಿ ಮದುವೆ ನಾಳೆಲ್ಲವು
ಆಗಿ ಬಾಳುತಲಿದ್ದೆನೊ ಗೋಪಾಲ
ಸೋಗೆಗಣ್ಣಿನ ಸುದತಿಯರ ಕಂಡು e್ಞÁನ
ನೀಗಿ ಬಾಳುತಿದ್ದೆನೊ ಗೋಪಾಲ
ರೋಗವಿಲ್ಲದೆ ನರಳುವನಂತೆ ಕಾಮನ
ಬಾಧೆಗೆ ಬೆಂಡಾದೆನೊ ಗೋಪಾಲ
ಆಗಲು ಪುತ್ರ ಬಾಂಧವರಿಗೋಸ್ಕರ ಭವ-
ಸಾಗರ ಎತ್ತಿದೆನೊ ಗೋಪಾಲ 5
ಬಾಲ್ಯಯೌವನವಳಿದು ಜರೆ ಒದಗಿ ನಾನು
ಮೇಲೇನರಿಯದಿದ್ದೆನೊ ಗೋಪಾಲ
ಕಾಲು ಕೈಗಳು ಕುಗ್ಗಿ ಕಣ್ಣುಗಳು ಭಯವಡಗಿ
ಬೀಳುತೇಳುತಲಿದ್ದೆನೊ ಗೋಪಾಲ
ನಾಲಿಗೆ ಉಡುಗಿ ನರಗಳೆಲ್ಲವು ಸಡಲಿ ಕೋಳು
ಹೋದಂತಿದ್ದೆನೊ ಗೋಪಾಲ
ಹಾಳುಗೋಡೆಗೆ ತಲೆಯನು ಕೊಟ್ಟು ಕಾದುವ
ಗೂಳಿಯಂದದಲಿದ್ದೆನೊ ಗೋಪಾಲ 6
ಹುಟ್ಟಿದಾಗಲೆ ಸತ್ತನೆಂಬರಾ ಬೈದುಂಡುಟ್ಟು
ಬಾಳುತಲಿದ್ದೆನೊ ಗೋಪಾಲ
ಮಟ್ಟ ತಗ್ಗಲು ಸತಿಸುತ ಸಹಜಾತ
ಗಿಷ್ಟನೆನಿಸಿಕೊಂಡೆನೋ
ಬಿಟ್ಟ ಪ್ರಾಣವ ಕಡೆಗ್ಹೋಗಲು ಪೆಣನೆಂದು
ಮುಟ್ಟರೆನಿಸಿಕೊಂಡೆನೊ ಗೋಪಾಲ
ಕೆಟ್ಟಡವಿಯ ಹದ್ದು ಕಾಗೆಗೆ ದೇಹವ
ಕೊಟ್ಟು ತಿನಿಸಿದೆನೊ ಗೋಪಾಲ7
ಹಾದಿವಿಡಿದು ವೈತರಣದೊಳು ಮುಳುಗಿ
ವೇದನೆಗೊಳುತಿದ್ದೆನೊ ಗೋಪಾಲ
ಕಾದಕಾವಲಿ ಉಕ್ಕಿನಕಂಬ ಕೀವಿನ ಸ್ವೇದ
ಕೊಂಡದಿ ಬಿದ್ದೆನೊ ಗೋಪಾಲ
ಭೇದವಿಲ್ಲದೆ ಪರ್ವತ ಪ್ರೇತ ಗುಹ್ಯ ಮೊದಲಾದ
ಯಾತನೆಗೊಳಗಾದೆ ಗೋಪಾಲ
ಸಾಧಿಸಿ ಹಿರಿಯರೊಳು ಮೀರಿ ನಡೆಯೆ ಯಮ
ಬಾಧೆಯೊಳು ಒರಲುವೆನೊ ಗೋಪಾಲ 8
ಇಷ್ಟಂತು ಕಳೆಯಲಾರೆನೊ ನರಕದೊಳೆಂದು
ನಿನ್ನ ನೆನೆಯದಿದ್ದೆನೊ ಗೋಪಾಲ
ನಷ್ಟದೇಹವ ನೆಚ್ಚಿ ನರರ ಕೊಂಡಾಡುತ
ದುಷ್ಟಬುದ್ಧಿಯೊಳಿದ್ದೆನೊ ಗೋಪಾಲ
ಅಷ್ಟರೊಳಗೆ ನಿನ್ನ ದಾಸರೊಳಾಡಲು
ಶ್ರೇಷ್ಠಜನ್ಮದಿ ಬಂದೆನೊ ಗೋಪಾಲ
ಸೃಷ್ಟಿಯೊಳು ತುರುಗೇರಿ ಗುರು ಅಚಲಾನಂದವಿಠಲ
ಸಲಹೆಂದೆನೋ ಗೋಪಾಲ 9
****