Showing posts with label ಇಂದು ಬನ್ನಿ ಇಂದಿರೇಶಾ ಇಂದುವಾರದಲಿ vijaya vittala. Show all posts
Showing posts with label ಇಂದು ಬನ್ನಿ ಇಂದಿರೇಶಾ ಇಂದುವಾರದಲಿ vijaya vittala. Show all posts

Wednesday, 16 October 2019

ಇಂದು ಬನ್ನಿ ಇಂದಿರೇಶಾ ಇಂದುವಾರದಲಿ ankita vijaya vittala

ವಿಜಯದಾಸ
ಇಂದು ಬನ್ನಿ ಇಂದಿರೇಶಾ ಇಂದುವಾರದಲಿ ಬಲು |
ಅಂದದಿಂದ ಮೆರೆವನಂದವ ನೋಡಾ ಪ

ಮುತ್ತಿನ ಕಿರೀಟ ಮೇಲೆ ಸುತ್ತಿದ ಲತೆ ತಳಲು |
ರತ್ನಗಂಬಳಿ ಕಲ್ಲಿಯ ಬುತ್ತಿ ಪೆಗಲೂ ||
ತೂತ್ತುತೂರಿ ಎಂದು ಸ್ವರ | ವೆತ್ತಿ ಊದುವ ಕೊಳಲು |
ಉತ್ತಮ ಶೋಕ್ಲವನು ಮೆರೆಯುತ್ತಲಿಪ್ಪುದು 1

ಉಂಗುರಗೂದಲು ಪುಬ್ಬು ಸಿಂಗಾಡಿ ಅಂದದಿ ಒಪ್ಪೆ |
ಅಂಗಾರ ಕಂಕಣ ಮಂಗಳಾಂಗ ನಿಸ್ಸಂಗ |
ರಂಗ ತುಂಗ ಮಹಿಮ ತಾರಂಗ ಅಂಗುಲಿಲಿ ರತ್ನ |
ದುಂಗುರವ ಯಿಟ್ಟ ಸುಖಂಗಳ ನೋಡಾ 2

ಉಂಗುರವ ನಡು ಮೇಲು ಕಂಗಳ ಕುಡಿನೋಟ |
ಗೋಪಾಂಗನೇರ ಮನಕೆ ಮೋಹಂಗಳ ತೋರೆ |
ಅಂಗಜನ್ನೆನೆಸಿ ತಾಪಂಗಳು ವೆಗ್ಗಳದಿಂದ |
ಹಂಗೀಗರಾಗೆ ನಗುವ ಗಂಗಾಜನಕ 3

ಲೋಕ ಬೆಲೆಗೊಂಬ ಅಲೌಕೀಕ ಮಣಿನಾಸದಲ್ಲಿ |
ರಾಕಾಬ್ಜಾನಂದದಿ ಮೊಗಾನೇಕ ಲೋಕೇಳಾ |
ನಿತ್ಯ ಬೇಕೆಂದು ಜಪಿಸಲು
ದೊರಕದ ದೊಂಬಲು ಬಾ ಯದುಕುಲಾಂಬರಾ4

ಕುಂಡಲ ಕರ್ಣ ಶ್ರೀಗಂಧ ಪೂಸಿದ ವಕ್ಷ |
ಪೂಗೊಂಚಲು ಸಣ್ಣನಾಮ ಆ ಗೆಜ್ಜೆಧ್ವನಿ |
ಆಗಮನ ಸೋಲಿಸೆ ನಾನಾ ಭೋಗಾದಲ್ಲಿಯಿಪ್ಪ | ಮಧ್ವ |
ಯೋಗಿಪ್ರಿಯಾ ವಿಜಯವಿಠ್ಠಲಾ ಗುಣನಿಧಿ 5
********