Showing posts with label ಕರುಣಿಸೋ ಕೋಮಲಾಂಗನೆ ನಾರಾಯಣಸುತನೆ indiresha. Show all posts
Showing posts with label ಕರುಣಿಸೋ ಕೋಮಲಾಂಗನೆ ನಾರಾಯಣಸುತನೆ indiresha. Show all posts

Friday, 27 December 2019

ಕರುಣಿಸೋ ಕೋಮಲಾಂಗನೆ ನಾರಾಯಣಸುತನೆ ankita indiresha

ಕರುಣಿಸೊ ಕೋಮಲಾಂಗನೆ ನಾರಾಯಣಸುತನೆ ಕರುಣಿಸೊ ಪ

ಕರುಣಿಸು ಎನ್ನನು ಸುರಸೇವಿತ ಪಾದಪರಮೇಷ್ಠಿಯ ನಿನ್ನ ಶರಣು ಬಂದಿಹೆನು ಅ.ಪ.

ವಾಣಿರಮಣ ನಿನ್ನ ಗಾನ ಮಾಡುವೆ ಸಿರಿಮಾನಿನಿ ಅರಸನ ಧ್ಯಾನದೊಳಿರಿಸೊ 1

ಶಿವಜನಕನೆ ನಿನ್ನ ಕವನ ಮಾಡುವ ಹೃದ್-ಭವನದೊಳಗೆ ಮಾಧವನ ತೋರಿಸೊ2

ಇಂದಿರೇಶನ ಮನವಿಂದು ಬೋಧಿಸಿ ಭವಬಂಧನ ಬಿಡಿಸಿ ಶರ ವೃಂದಾಸನ ಗುರು 3
***********