ಭಜಿಸಬಾರದೆ ಮನವೆ ಭಜಿಸಬಾರದೆ ಭಜಿಸಲಿಕ್ಕೆ ಭಾವದಿಂದ ನಿಜವಾ ಗೊಲಿವ ಹರಿ ಮುಕುಂದ ಪ
ನಿಜವಬಿಟ್ಟು ದಣವದ್ಯಾಕೆ ತ್ರಿಜಗಪತಿಗೊಂದಿಸದೆ ತಾನು ಭಜನ ಮುಖ್ಯವೆಂದು ಸುಜನರೆಲ್ಲ ಪೇಳುತಿರಲಿಕ್ಕಾಗಿ 1
ಪ್ರೀತಿಯಿಂದರ್ಜುನ ನೋಡಿ ಗೀತೆಯಲ್ಲಿ ಶ್ರೀಕೃಷ್ಣತಾನು ನೀತಿಹಿತವ ಭಕ್ತಿಯೋಗದಲ್ಲಿ ಸಾರತಿರಲಿಕ್ಕಾಗಿ 2
ಪ್ರಕಟಭಾವಕೊಲಿದ ನೋಡಿ ಅಖಿಲದೊಳು ಸುಲಭದಿಂದ ಭಕುತಿ ಸುಖವನಿತ್ತು ಸಲಹುತಿಹ್ಯ ಮಹಿಪತಿಸ್ವಾಮಿಗಿನ್ನು 3
***