Showing posts with label ಮನಿ ಮನಿಗೆ ಗುರುಭಕ್ತರಾದವರು ಜಗದೊಳಗೆಲ್ಲಾ gurumahipati. Show all posts
Showing posts with label ಮನಿ ಮನಿಗೆ ಗುರುಭಕ್ತರಾದವರು ಜಗದೊಳಗೆಲ್ಲಾ gurumahipati. Show all posts

Wednesday, 1 September 2021

ಮನಿ ಮನಿಗೆ ಗುರುಭಕ್ತರಾದವರು ಜಗದೊಳಗೆಲ್ಲಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು


ಮನಿ ಮನಿಗೆ ಗುರುಭಕ್ತರಾದವರು | ಜಗದೊಳಗೆಲ್ಲಾ | ಘನ ನೆಲೆ ಕಂಡವರೊಬ್ಬರಿಲ್ಲಾ ಪ 


ಗುರು ಸ್ವರೂಪರಿಯದೆ | ನರಭಾವ ಮರಿಯದೆ | ಗುರು ಭಕ್ತಿ ಶೀಲಾ ತಾ ತಿಳಿಯದೇ 1 

ಸಂಪ್ರದಾಯಕರು ಯನಿಸಿಕೋಬೇಕು | ಯಂದು ಬಯಸೀ | ಕ್ಷಿಪ್ರದಿ ಮಂತ್ರವ ಕೊಂಬರು ಅರಸಿ 2 

ಸುರಸ ಮಾತಾಡಿದರ | ಗುರುಯಂದಿರುತಿಹರು ಸಾರೆ | ಬಿರುನುಡಿಕೇಳಲು ತೊಲಗುವರು ಬ್ಯಾರೇ 3 

ಮೊಲೆ ಬದಿಯೊಲುಣ್ಣಿ | ಮೊತ್ತಾ ಇರುವಂತೆ ನೋಡಿಸತ್ಯಾ | ನೆಲೆ ಭಕ್ತಿಯೆತ್ತಾ ತಾನಿವ್ಹನೆತ್ತಾ 4 

ಹುರಡೆ ಡಾಂಭಿಕದಿಂದಾ | ಚರಿಸಿದರೇನು ಛಂದಾ | ಗುರುಮಹಿಪತಿ ಪ್ರಭು ನೆಲಿಯಲಿ ಯಂದಾ 5

***