Showing posts with label ಳಳ- RSS- ಸಂಘದಂಗಳದಲ್ಲಿ ನಡೆದಿದೆ others SANGHADANGALADALLI NADEDIDE rss. Show all posts
Showing posts with label ಳಳ- RSS- ಸಂಘದಂಗಳದಲ್ಲಿ ನಡೆದಿದೆ others SANGHADANGALADALLI NADEDIDE rss. Show all posts

Friday, 24 December 2021

ಸಂಘದಂಗಳದಲ್ಲಿ ನಡೆದಿದೆ others SANGHADANGALADALLI NADEDIDE rss

   


RSS song .

ಸಂಘದಂಗಳದಲ್ಲಿ ನಡೆದಿದೆ

ಧ್ಯೇಯ ಸಾಧನೆ ಅವಿರತ

ಹಸಿವು ಕಾಣದು ತೃಷೆಯು ಕಾಡದು

ಅಸುವು ರಾಷ್ಟ್ರ ಸಮರ್ಪಿತ ||ಪ||


ಕಸುವು ಕುಂದುವ ಮೊದಲೇ ಮೋಸದ

ಮುಸುಕ ಸರಿಸುವ ಹಂಬಲ

ವಸುಧೆಗೊದಗಿದ ನೋವ ನೀಗಲು

ನಮಗೆ ದೇವರೆ ಬೆಂಬಲ ||೧||


ಶುದ್ಧ ಸಾತ್ವಿಕ ತಪದ ಜತೆಗಿದೆ

ಶಸ್ತ್ರ ಶಾಸ್ತ್ರ ಪ್ರಬುದ್ಧತೆ

ಯುದ್ಧ ಸಿದ್ಧತೆ ಭರದಿ ನಡೆದಿದೆ

ಬುದ್ಧ ವಚನಕೂ ಬದ್ಧತೆ ||೨||


ಸದ್ದು ಗದ್ದಲವಿರದೆ ಸಭ್ಯತೆ

ಹೃದಯ ಗದ್ದುಗೆ ಏರಿದೆ

ವಿದ್ಯೆ ಬುದ್ಧಿಗೆ ಸಹಜ ಸವಿನಯ

ಸದ್ಗುಣವು ಜತೆಗೂಡಿದೆ ||೩||


ಹೆಗಲನೊಡ್ಡಿಹೆ ರಾಷ್ಟ್ರಕಾರ್ಯಕೆ

ನಡುವೆ ನಿಲುಗಡೆ ಸಲ್ಲದು

ಪರಮ ವೈಭವ ಗುರಿಯ ತಲುಪದೆ

ಒರಗಲಿದೊ ತನು ಒಲ್ಲದು ||೪||

***

saMGadaMgaLadalli naDedide

dhyEya sAdhane avirata

hasivu kANadu tRuSheyu kADadu

asuvu rAShTra samarpita ||pa||


kasuvu kuMduva modalE mOsada

musuka sarisuva haMbala

vasudhegodagida nOva nIgalu

namage dEvare beMbala ||1||


Suddha sAtvika tapada jategide

Sastra SAstra prabuddhate

yuddha siddhate Baradi naDedide

buddha vacanakU baddhate ||2||


saddu gaddalavirade saByate

hRudaya gadduge Eride

vidye buddhige sahaja savinaya

sadguNavu jategUDide ||3||


hegalanoDDihe rAShTrakAryake

naDuve nilugaDe salladu

parama vaiBava guriya talupade

oragalido tanu olladu ||4||

***