ankita ವೆಂಕಟೇಶ
ರಾಗ: ಸುರಟಿ ತಾಳ: ಅಟ
ಪಾಲಿಸೊ ಸದ್ಗುಣಸಾಂದ್ರ ಶ್ರೀ ರಾಘವೇಂದ್ರ ಪ
ಯತಿಕುಲತಿಲಕ ಸದ್ಗತಿದಾಯಕನೆ ದು-
ರ್ಮತಖಂಡನ ಘೋರದುರಿತಹರ ಕಲುಷಹಾರ 1
ಭಕ್ತಸ್ತೋಮ ಭವಭಯ ಪರಿಹಾರ ವಿ-
ರಕ್ತ ಮುನೇಂದ್ರ ಶ್ರೀ ಗುರುಸಾರ್ವಭೌಮ ಸುಜ್ಞಾನಾಬ್ಧಿಸೋಮ 2
ದೋಷವರ್ಜಿತ ವೆಂಕಟೇಶನ ದೂತ
ದಾಸ ನಿನ್ನವನೆಂದು ಪೋಷಿಸು ತ್ವರಿತ ಬಿನ್ನೈಸುವೆ ನಿರುತ 3
***