Monday, 6 September 2021

ಪಾಲಿಸೊ ಸದ್ಗುಣಸಾಂದ್ರ ಶ್ರೀ ರಾಘವೇಂದ್ರ ಯತಿಕುಲತಿಲಕ ankita venkatesha

 ankita ವೆಂಕಟೇಶ 

ರಾಗ: ಸುರಟಿ ತಾಳ: ಅಟ


ಪಾಲಿಸೊ ಸದ್ಗುಣಸಾಂದ್ರ ಶ್ರೀ ರಾಘವೇಂದ್ರ


ಯತಿಕುಲತಿಲಕ ಸದ್ಗತಿದಾಯಕನೆ ದು-

ರ್ಮತಖಂಡನ ಘೋರದುರಿತಹರ ಕಲುಷಹಾರ 1

ಭಕ್ತಸ್ತೋಮ ಭವಭಯ ಪರಿಹಾರ ವಿ-

ರಕ್ತ ಮುನೇಂದ್ರ ಶ್ರೀ ಗುರುಸಾರ್ವಭೌಮ ಸುಜ್ಞಾನಾಬ್ಧಿಸೋಮ 2

ದೋಷವರ್ಜಿತ ವೆಂಕಟೇಶನ ದೂತ

ದಾಸ ನಿನ್ನವನೆಂದು ಪೋಷಿಸು ತ್ವರಿತ ಬಿನ್ನೈಸುವೆ ನಿರುತ 3

***


No comments:

Post a Comment