ರಾಗ: ಹಂಸಾನಂದಿ ತಾಳ: ಆದಿ
ರಾಘವೇಂದ್ರ ಗುರುರಾಯರ ಭಜಿಸಿರೊ
ಅಘಸಂಕುಲ ಪರಿಹಾರ ಪಡೆಯಿರೊ ಪ
ಭಾಗವತರತುನನ ರಘುರಾಮಭಜಕನ
ನಿಗಮಾಗಮಜ್ಞನ ಅಗಣಿತಮಹಿಮನ ಅ. ಪ
ನರಹರಿಯ ತೋರಿಸಿ ನರಪನಾಗಿ ಸೇವಿಸಿ
ಸಿರಿಕೃಷ್ಣನ ಒಲಿಸಿ ಮೆರೆದವ್ಯಾಸತಪಸಿ 1
ಸರುವಜ್ಞರಮತ ಸಾರಸುಧೆಗೆಹಿತ
ಪರಿಮಳವೀಯುತ ಹರಹಿದಪ್ರಥಿತ 2
ಖೇಟಪಿತಾನಂತವಿಠಲ ಪ್ರಿಯಸಂತ
ದಾಟಿಸಿಭವ ತ್ವರಿತ ದಿಟಪಾಲಿಪಮಹಿತ 3
***