..
ಬೆಳಗಿರೆ ಹರುಷದಿ ಆರುತಿಬೇಗ |
ಸತಿ ಮುದದಿ ಶಿರಿ ನಿಲಯನಿಗೀಗ ಪ
ನಿರಂಜನ | ನಿರಾಮಯ | ನೀರೇರುಹದಳ ಲೋಚನ
ನರಪ್ರಿಯ | ಸುಮಹಿತ ಸುಚರಿತ ಮರುತ ವಿನುತಗೆ 1
ದೀನಾಪ್ತಗೆ | ಶ್ರೀನಾಥಗೆ | ಆನಂದಾತಿಶಯದಲಿ ಸಭೆಯೊಳು
ಮಾನಿನಿಯಳ ಅಭಿಮಾನ ಕಾಯ್ದವಗೆ 2
ಹೇಮಾಂಬರ | ಶ್ರೀಮಾವರ | ಪ್ರೇಮಾದರದಿ | ಸು
ಧಾಮನ ಸಲಹಿದ ಶಾಮಸುಂದರ
ಶುಭಮೂರುತಿಗೀಗ ಆರುತಿ ಬೇಗ 3
***