Wednesday, 1 September 2021

ಬೆಳಗಿರೆ ಹರುಷದಿ ಆರುತಿಬೇಗ ಸತಿ ಮುದದಿ ಶಿರಿ ನಿಲಯನಿಗೀಗ ankita shyamasundara

 ..

ಬೆಳಗಿರೆ ಹರುಷದಿ ಆರುತಿಬೇಗ |

ಸತಿ ಮುದದಿ ಶಿರಿ ನಿಲಯನಿಗೀಗ ಪ


ನಿರಂಜನ | ನಿರಾಮಯ | ನೀರೇರುಹದಳ ಲೋಚನ

ನರಪ್ರಿಯ | ಸುಮಹಿತ ಸುಚರಿತ ಮರುತ ವಿನುತಗೆ 1


ದೀನಾಪ್ತಗೆ | ಶ್ರೀನಾಥಗೆ | ಆನಂದಾತಿಶಯದಲಿ ಸಭೆಯೊಳು

ಮಾನಿನಿಯಳ ಅಭಿಮಾನ ಕಾಯ್ದವಗೆ 2


ಹೇಮಾಂಬರ | ಶ್ರೀಮಾವರ | ಪ್ರೇಮಾದರದಿ | ಸು

ಧಾಮನ ಸಲಹಿದ ಶಾಮಸುಂದರ

ಶುಭಮೂರುತಿಗೀಗ ಆರುತಿ ಬೇಗ 3

***


No comments:

Post a Comment