Showing posts with label ನಂದಕಂದನೇ ಇವಸುರವೃಂದ ವಂದ್ಯನೇ ಧರೆಯ ಮರೆಗಿಂದು gurumahipati. Show all posts
Showing posts with label ನಂದಕಂದನೇ ಇವಸುರವೃಂದ ವಂದ್ಯನೇ ಧರೆಯ ಮರೆಗಿಂದು gurumahipati. Show all posts

Wednesday, 1 September 2021

ನಂದಕಂದನೇ ಇವಸುರವೃಂದ ವಂದ್ಯನೇ ಧರೆಯ ಮರೆಗಿಂದು ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ನಂದ ಕಂದನೇ ಇವಸುರವೃಂದ ವಂದ್ಯನೇ ಧರೆಯ ಮರೆಗಿಂದು ಬಂದನೇ ಹಿಂದೆವೇದವನೆ ರಕ್ಷಿಸಿದವನೇ ಮಂದರಗಿರಿ ಪೊತ್ತವನೇ ಸುಂದರಿ ಶರಯನೆ ಬಿಡಿಸಿದ ದೇವನೇ ಛಂದದಿ ಮಗು ಕಾಯ್ದವನೇ 1 

ನಾನಾ ರೂಪನೇ ಧರಿಸಿ ಧರ್ಮವನೆ ಸ್ಥಾಪನೇ ಮಾಡುವದುಷ್ಟ ಜನ ಲೋಪನೇ ತುನಾಭಿಲಾಷನೇ ನೆಗೆಹಿದ ಪರುಷನೇ ಮಾನಿನೀ ಕೃತ್ಕೂಲುಷನೇ ಮಾನಿನೀ ಹೃತ್ಕಲುಷನೇ ಬುದ್ಧ ಕಲ್ಕೇಶನೇ ದಾನವ ಜಗದಂಕುಶನೇ 2 

ಮಾನುವೆನ್ನಲೆ ಗಿರಿಯ ಪೊತ್ತದೇನು ಕಣ್ಣಿಲೇ ಕಾಣದೇ ಜನ ತಾನು ತನ್ನಲೇ ಸ್ವಾನಂದ ಲೀಲೆ ದೋರಲು ಬಾಲೇ ನಿಜಗುಣ ಮಾತೇ ಮಹಿಪತಿಜ ಪ್ರಿಯನ ಬಲೆ3

***