ankita ಪಂಡರೀನಾಥವಿಠಲ
ರಾಗ: ಭೈರವಿ ತಾಳ: [ಮಿಶ್ರನಡೆ]
ಕಂಡೆ ಕಂಡೆ ರಾಯರ ನಾ ಕಂಡೆ ಕಂಡೆ ಪ
ಕಂಡೆ ಕಂಡೆನು ರಾಘವೇಂದ್ರರ
ದಂಡ ನಮನವ ಮಾಡಿ ದಣಿದೆನು
ದಂಡ ಕಮಂಡಲದಿ ಮೆರೆಯುವ
ಹಿಂಡು ಭಕ್ತರ ಕಂಡು ಕಾಯ್ವರ ಅ ಪ
ಚೆಂದ ಬೃಂದಾವನದೊಳಿರುವರ
ಕುಂದುರಹಿತ ಸುಧೀಂದ್ರಕರಜರ
ತಂದೆ ಶ್ರೀಪತಿಭಜಕ ಭವ್ಯರ
ಮಂದಮತಿ ಯೆನ್ನನ್ನು ಕಾಯ್ವರ 1
ತುಳಸಿ ಮಾಲೆಯ ಧರಿಸಿ ಮೆರೆವರ
ಜಲಜನಾಭನ ಮೆಚ್ಚಿಸಿಪ್ಪರ
ಅಲವಬೋಧ ಮತ ಉದ್ಧಾರಕ
ಒಲಿದು ಸೇವೆಗೆ ವರಗಳಿಪ್ಪರ 2
ಹಲವು ಮಹಿಮೆಯ ತೋರುತ್ತಿಪ್ಪರ
ಒಲವಿನಿಂದಲಿ ಕರೆಯೆ ಬರುವರ
ಸುಲಭ ಸುಂದರ ವ್ಯಾಸರಾಯರ
ನಳಿನ ನಾಭನ ಕರುಣಪಾತ್ರರ 3
ದೈತ್ಯನುದರದಿ ಬಂದ ಶ್ರೇಷ್ಠರ
ಸ್ತುತ್ಯರಾದರ ಶಿಶು ಪ್ರಹ್ಲಾದರ
ಮಿಥ್ಯಜ್ಞಾನವ ಖಂಡಿಸಿ ಹರಿ
ಸತ್ಯ ಸರ್ವೋತ್ತಮನು ಎಂದರ 4
ಕರುಣಸಾಗರ ಕೀರ್ತಿವಂತರ
ಪರಮಶಾಂತರು ತಪಿಸಿ ಗುರುಗಳ
ಧರಣಿಯೊಳು ಮಂಚಾಲೆಲಿಪ್ಪರ
ದಾಸ ಪಂಢರಿನಾಥವಿಠಲನ 5
***