Showing posts with label ನಾರಾಯಣ ಪಂಜರನಾರಾಯಣಾಯ ನಮೊ prasannavenkata. Show all posts
Showing posts with label ನಾರಾಯಣ ಪಂಜರನಾರಾಯಣಾಯ ನಮೊ prasannavenkata. Show all posts

Wednesday, 13 November 2019

ನಾರಾಯಣ ಪಂಜರನಾರಾಯಣಾಯ ನಮೊ ankita prasannavenkata

by ಪ್ರಸನ್ನವೆಂಕಟದಾಸರು
ನಾರಾಯಣ ಪಂಜರನಾರಾಯಣಾಯ ನಮೊ ನಾರಾಯಣಾಯ ನಮೊನಾರಾಯಣಾಯ ನಮೊ ನಾರಾಯಣನಾರದರ ಮುಖದಿಂದ ನರಕಸ್ಥರೆಬ್ಬಿಸಿದೆನಾರಾಯಣಾಯ ನಮೊ ನಾರಾಯಣ ಪ.

ಮತ್ತಕರಿಯವಸಾನಕಂಜಿ ಹರಿಯೆ ನೀ ಕಾಯ್ದೆ *ಭಕ್ತ ಪ್ರಹ್ಲಾದನೇಕಾಂಗ ನಿಷ್ಠೆಗೆ ಒಲಿದೆ 1

ಪೃಥುವಿಗಳ್ಳನನಿರಿದು ಸತಿಯನುದ್ಧರಿಸಿದೆಪೃಥುಚಕ್ರವರ್ತಿಗೆ ಪ್ರತ್ಯಕ್ಷನಾಗ್ಯೊಲಿದೆ2

ಶೂಲಿಯನು ಬೆಂಬತ್ತಿ ಸುಡುವೆನೆಂಬನ ಸುಟ್ಟೆಶೀಲವಿಡಿದಂಬರೀಷನ ಮತವ ಗೆಲಿಸಿದೆಯೊ 3

ಮಕರರೂಪದಿ ಸತ್ಯವ್ರತಗೆ ತತ್ವವನೊರೆದೆಮುಖದಿಶ್ರುತಿಪಿಡಿತಂದು ವಾರಿಜಾಸನಗಿತ್ತೆ4

ಪುರುಹೂತಗಖಿಳ ಪರಮಾರ್ಥವನು ಅರುಹಿದೆಸುರಪನ್ನ ಭಯವಟ್ಟಿ ಧ್ರುವಗೆ ಧ್ರುವಪದವಿತ್ತ್ತ್ತೆ 5

ಮಹಾಪಾಪನಿರತ ಅಜಾಮಿಳನಿಷ್ಟ ಕರಿಸಿದೆಮಹಿದಾಸನಾಗಿ ತಾಯಿಗೆ ತತ್ವವನು ಪೇಳ್ದೆ 6

ಮುನಿ ಕಾಲಲೊದೆಯೆ ಎದ್ದು ಕರುಣಿಸಿದೆ ಕರುಣಾನಿಧಿಮುನಿವೆಂಗಳರೆಯಾಗೆ ಪದಸೋಂಕಿಸ್ಯೆತ್ತಿದೆಯೊ 7

ಮಖವ ರಕ್ಷಿಸಿ ರಾಜಋಷಿಗಭೀಷ್ಟೆಯನಿತ್ತೆಮಕರಧ್ವಜಾರಿ ಧನು ಮುರಿದವನಿಜೇಶ8

ಶುಭಕಪೀಶಗೆ ಅಭಯವರವಿತ್ತು ಕೈಪಿಡಿದೆಶುಭಕಂಠನಂಜಿಕೆಯ ಹನುಮ ಹೇಳಲು ಕಳೆದೆ 9

ಶರಣು ಹೊಕ್ಕಿರೆ ವಿಭೀಷಣಗರಸುತನ ಕೊಟ್ಟೆಶರದಿ ರಾವಣನರಿದು ಸುರರ ಸಂಕಟ ಹರಿದೆ 10

ಅನುಜನಗ್ನಿಗೆÉ ಧುಮುಕಲವಧಿ ಮೀರದೆ ಪೊರೆದೆಅನಿಮಿಷರ ನಿಕರಕತಿ ಆಹ್ಲಾದ ಬೆಳೆಯಿಸಿದೆ 11

ಉರಿನುಂಗಿ ಗಿರಿನೆಗಹಿ ವ್ರಜವ ಪಾಲನೆ ಮಾಡ್ಡೆಉರಗನೆಳೆತಂದವನ ರಾಣಿಯರ ಸ್ತುತಿಗೊಲಿದೆ 12

ಕ್ರತುನಾರಿಯರನ್ನ ಸವಿದುಂಡು ಸುಖವಿತ್ತೆಕ್ರತುಭೋಕ್ತø ಕ್ರತುಗಾತ್ರ ಕ್ರತುಪಾಲ ಕ್ರತುಶೀಲ13

ಗೋಪ ಸ್ತ್ರೀಯರ ಕುಚದಿ ನ್ಯಸ್ತ ಚರಣಾಬ್ಜಯುಗಗೋಪೀ ಜನಜಾರನವನೀತದಧಿಚೋರ14

ವಂಶಗಾಯನ ಪ್ರಿಯ ವಿಧುಕುಲೋದ್ಭವ ಕೃಷ್ಣವಂಶವರ್ಧಕಸುಜನವಂಶಮರ್ದಕ ಕುಜನ15

ಅಕ್ರೂರವಂದ್ಯಕಂಸಾರಿಕುಬ್ಜಾರಮಣಆಕ್ರಂದಿಸಿದ ತಂದೆ ತಾಯಿಯರ ಭಯವಳಿದೆ 16

ಅದಿತಿ ಕುಂಡಲದಾತ ಭಗದತ್ತವರದನೆಅಧಿಪತಿಗಳಧಿಪತಿಯೆ ಭೈಷ್ಮಿ ಸತ್ಯಾರಮಣ 17

ಶಂಭುವಂದಿತಪಾದ ಸಾಂದೀಪೋದ್ಧವ ಪ್ರಿಯಶಂಬರಾರಿಯ ಜನಕ ಯಜÕಪೂಜಾಗ್ರಣಿಯೆ 18

ಪಾಂಡವರ ಪ್ರಾಣ ದ್ರೌಪದಿ ಮಾನರಕ್ಷಕನೆಪೌಂಡ್ರಕಶೃಗಾಲಕೌರವ ಭೂಮಿ ಭಾರಹರ19

ಅಭಿಮನ್ಯುನಾತ್ಮಜನ ಬಸುರೊಳಗೆ ಸಲಹಿದೆಯೊಅಭಯದಲಿ ಪಾಂಡವರ ಸಂತತಿಯ ಬೆಳೆಸಿದೆಯೊ 20

ಗರುಡ ಗಂಧರ್ವಕಿನ್ನರಗೀತ ಸಂಪ್ರೀತಗರುವೆ ಲಕುಮಿಯ ಕೂಡ ಕ್ರೀಡಾದ್ರಿಯಲ್ಲಿರುವೆ 21

ಶಂಖ ಚಕ್ರ ಗದಾಬ್ಜ ಶ್ರೀವತ್ಸ ಶೋಭಿತನೆಸಂಖ್ಯೆರಹಿತಾಭರಣ ಭೂಷಣಾವ್ಯಾಕೃತನೆ 22

ಮೀನ ಕಶ್ಯಪ ಪೋತ್ರಿ ನೃಹರಿ ವಾಮನ ಭಾರ್ಗ್ವಮಾನವಪ ಕೃಷ್ಣಬುದ್ಧಕಲ್ಕಿ ಕಪಿಲಾತ್ರೇಯ23

ಸ್ವಾಮಿ ತೀರ್ಥಾಂಬು ಅಂತರ್ಗಂಗಾಭಿಷಿಕ್ತಸ್ವಾಮಿ ಭೂವರಾಹ ವೈಕುಂಠನಾಥ ವಿಶ್ವೇಶ 24

ಷಟ್ಕೋಟಿ ತೀರ್ಥಯುತಚರಣ ಶ್ರೀಭೂರಮಣಷಟ್ಕಮಲನಿಲಯ ಚಿನ್ಮಯ ಚಿದ್ಗುಣಾರ್ಣವನೆ 25

ಭಕ್ತಾಭಿಮಾನಿ ಭವದೂರ ಭಕ್ತರ ಪ್ರಭುವೆಭಕ್ತವತ್ಸಲ ಕೃಪಾಂಬುಧಿಪರಾತ್ಪರಕೃಷ್ಣ26

ವಸುಧೆವೈಕುಂಠ ಮಂದಿರವಾಸ ಶ್ರೀನಿವಾಸವಸುಪ್ರೀತ ವಸುಕರ್ತ ವಸುದಾತ ವಸುಪೂರ್ಣ 27

ಆದಿನಾಥÀಪ್ರಮೇಯಾದಿ ಪುರುಷೋತ್ತಮನೆಆದಿಮಧ್ಯಾಂತ ರಹಿತಾದ್ಯಮೂರುತಿ ವಿಷ್ಣು 28

ಬದುಕಿಪ್ಯಾದರೆ ನಿನ್ನ ಹೊಗಳಿಕೆಲಿ ಬದುಕಿಸೈಬುಧರ ಸಂಗತಿ ಕೊಟ್ಟು ಮನ್ನಿಸೆನ್ನನು ತಂದೆ 29

ಕಿವಿಯಲ್ಲಿ ಮುಖದಲ್ಲಿ ನಾಮಾಮೃತವÀ ತುಂಬುಕವಲಾಗದೆ ಮನೋಳಿ ಮಿಗೆ ಪದಾಬ್ಜವ ತೋರು 30

ಭವಭವದಿ ತೊಳತೊಳಲಿ ಬಳಬಳಲಿ ಬಲುದಣಿದೆಭವವಿರಿಂಚ್ಯಾದಿ ಕರಿಗಭಯದನೆ ನೀ ಸಲಹು31

ನೀ ತಾಯಿ ನೀ ತಂದೆ ನೀ ಬಂಧು ನೀ ಬಳಗನೀತಿಗಳನರಿಯೆ ನಿನ್ನಯ ನಾಮವೆ ಗತಿಯು 32

ತನು ನೆಚ್ಚಿಕಿಲ್ಲ ಚಿತ್ತದ ಗತಿಯು ನೀಟಿಲ್ಲತನಯತರುಣಿ ಕೊನೆಯ ಸಂಗತಿಗೆ ಆರಿಲ್ಲ33

ದೋಷಗಳನರಸದೆನ್ನನು ಸಾಕು ಸಾಕಯ್ಯದಾಸಪಾಲಕ ದೇವ ಡಿಂಗರರ ಸಂಜೀವ 34

ನಿನ್ನ ಮೂರುತಿ ನೋಡಿ ನೋಡಿ ನೋಡಿ ನೋಡಿನಿನ್ನ ಬಿಂಬವನೆಂದು ಕಂಡು ಕೊಂಡಾಡುವೆನೊ 35

ನಿನ್ನ ಮೈ ಬೆಮರ್ಹೊಳೆಯಲ್ಲೆನ್ನ ಮುಳುಗಿಸಿನಿನ್ನವ ನಾ ನಿನ್ನವರ ಕೈಲಿ ಕೊಡು ಗಡಗಡ 36

ವಾರಿಯಲಿ ಸ್ಥಳದಲ್ಲಿ ಅಡವಿಲೆಲ್ಲೆಲ್ಲಿ ಕಾಯೊವಾರಾಹ ವಾಮನ ನೃಸಿಂಹ ಕೇಶವ ಸ್ವಾಮಿ 37

ಸತ್ಕುಲೋದ್ಭವನಾದೆ ಸನ್ಮಾರ್ಗರಿಯಲಿಲ್ಲಸತ್ಕರ್ಮಗಳಿಗೆ ಬಹಿಷ್ಕøತನಾಗಿ ಬಾಳುತಿಹೆ 38

ಒಂದು ಜಾವದ ತಪ್ಪನೆಂದೆಂದಿಗುಣಲಾರೆವಂದಿಸುವೆ ಸಾಷ್ಟಾಂಗತ್ರಾಹಿತ್ರಾಹಿಪಾಹಿತ್ರಾಹಿ39

ಮಧ್ವೇಶ ಮಧ್ವಪ್ರಿಯ ಮಧ್ವಮತ ಪ್ರತಿಪಾಲಮಧ್ವಗುರು ಸ್ತುತ್ಯ ಮಧ್ವಾರ್ಚಿತ ಪದಾಬ್ಜಹರಿ40

ಏನರಿಯೆನೇನರಿಯೆ ನೀನೆ ನೀಗೆಲೆಲೆಎನ್ನಘವ್ರಜ ಪ್ರಸನ್ನವೆಂಕಟ ಕೃಷ್ಣ 41
*********