helavana katte
ಈತ ಲಿಂಗದೇವ ಶಿವನು
ಆತ ರಂಗಧಾಮ ವಿಷ್ಣು
ಮಾತ ಕೇಳೊ ಮಂಕು ಮನುಜ
ಮನದ ಅಹಂಕಾರ ಬಿಟ್ಟು ಪ.
ವೇದಕ್ಕೆ ಸಿಕ್ಕಿದನೀತ
ವೇದನಾಲ್ಕು ತಂದನಾತ
ಬೂದಿ ಮೈಯೊಳು ಧರಿಸಿದನೀತ
ಪೋದಗಿರಿಯ ಪೊತ್ತನಾತ 1
ವ್ಯಾಧನಾಗಿ ಒಲಿದನೀತ
ಮಾಧವ ಮಧುಸೂದನನಾತ
ಮದನನ್ನ ಉರಿಹಿದನೀತ
ಮದನನಪಡೆದಾತನಾತ 2
ಗಂಗೆಯ ಪೊತ್ತವನೀತ
ಗಂಗೆ ಪದದಿ ಪಡೆದನಾತ
ತುಂಗ ಹೆಳವನಕಟ್ಟೆ
ಲಿಂಗ ಅಂತರಂಗ ರಂಗನಾಥ 3
***
ರಾಗ : ದುರ್ಗ ತಿಶ್ರ ಏಕತಾಳ
ಈತ ಲಿಂಗದೇವ ಶಿವನು, ಆತ ರಂಗಧಾಮ ವಿಷ್ಣು
ಮಾತನಾಡೋ ಮಂಕು ಮನುಜ
ಮನದ ಅಹಂಕಾರವನೇ ಜರಿದು
ವೇದಕೆ ಸಿಲುಕಿದನೀತ, ವೇದ ನಾಲ್ಕು ತಂದನಾತ
ಬೂದಿ ಮೈಯಲಿ ಧರಿಸಿದನೀತ
ಭುವನ ಗಿರಿಯ ಪೊತ್ತನಾತ
ಆದಿ ದೈತ್ಯರ ಗೆಲಿದನೀತ, ಮಾಧವ ಮಧುಸೂದನನಾತ
ಮದನನನು ಧಹಿಸಿದನೀತ
ಮನ್ಮಥನ್ನ ಪಡೆದನಾತ
ಗಂಗೆಯ ಪೊತ್ತನೀತ, ಗರುಡವಾಹನ ಏರಿದನಾತ
ತುಂಗ ಹೆಳವನಾಕಟ್ಟೆ
ಲಿಂಗನೀತ ರಂಗನಾಥ
*********
ಈತ ಲಿಂಗದೇವ ಶಿವನು, ಆತ ರಂಗಧಾಮ ವಿಷ್ಣು
ಮಾತನಾಡೋ ಮಂಕು ಮನುಜ
ಮನದ ಅಹಂಕಾರವನೇ ಜರಿದು
ವೇದಕೆ ಸಿಲುಕಿದನೀತ, ವೇದ ನಾಲ್ಕು ತಂದನಾತ
ಬೂದಿ ಮೈಯಲಿ ಧರಿಸಿದನೀತ
ಭುವನ ಗಿರಿಯ ಪೊತ್ತನಾತ
ಆದಿ ದೈತ್ಯರ ಗೆಲಿದನೀತ, ಮಾಧವ ಮಧುಸೂದನನಾತ
ಮದನನನು ಧಹಿಸಿದನೀತ
ಮನ್ಮಥನ್ನ ಪಡೆದನಾತ
ಗಂಗೆಯ ಪೊತ್ತನೀತ, ಗರುಡವಾಹನ ಏರಿದನಾತ
ತುಂಗ ಹೆಳವನಾಕಟ್ಟೆ
ಲಿಂಗನೀತ ರಂಗನಾಥ
*********