ಗಾನಲೋಲನಾದ ಶ್ರೀನಿವಾಸನಾ ಸರ್ವೇಶನಾ
ಗಾನದಿಂ ಭಜನೆ ಮಾಡೋ ಜಾನಕೀ ರಮಣನಾ ಪ
ಮಲಗಿ ಪಾಡೇ ಮುರಲೀಧರನು ವಲಿದು ಕುಳಿತು ಕೇಳ್ವನೋ
ಕುಳಿತು ಪಾಡೇ ನಿಲುವ ನಿಂದರೆ ನಲಿವನೋ ತಾ ವಲಿವನೋ 1
ಬಾಲನಾ ಗೋಪಾಲನಾ ಸುಶೀಲನಾ ಕೃಪಾಲನಾ
ನೀಲಮೇಘ ಲಕುಮೀಲೋಲನಾ ವಿಶಾಲನಾ 2
ನಿತ್ಯನಾ ನಿರ್ಲಿಪ್ತನಾ ಪರಮಾತ್ಮ ಸಕಲವ್ಯಾಪ್ತನಾ
ಭಕ್ತರಲ್ಲಿ ನಿರುತ ಪ್ರೀತಿಯುಕ್ತನಾ ಸ್ವಶಕ್ತನಾ 3
ಆನಂದನಾ ದಯಾವೃಂದನಾ ಮುಕುಂದನಾ
ಚಂದ್ರಕುಲಕೇ ಇಂದ್ರನಾ ಉಪೇಂದ್ರನಾ ಗೋವಿದನಾ 4
ಧೀರನಾ ಗಂಭೀರನಾ ಯದುವೀರನಾ ದಧಿಚೋರನಾ
ಮಾರಜನಕ ವರದ ಶ್ರೀ ಹನುಮೇಶ ವಿಠಲರಾಯನಾ 5
****