Showing posts with label ಆರು ಪೇಳಿದರೋ ಜೀವಾ ನಿನಗಾರು ಪೇಳಿದರೋ hanumesha vittala. Show all posts
Showing posts with label ಆರು ಪೇಳಿದರೋ ಜೀವಾ ನಿನಗಾರು ಪೇಳಿದರೋ hanumesha vittala. Show all posts

Friday, 27 December 2019

ಆರು ಪೇಳಿದರೋ ಜೀವಾ ನಿನಗಾರು ಪೇಳಿದರೋ ankita hanumesha vittala

by ಹನುಮೇಶ ವಿಠಲ
ರಾಗ :  ಭೈರವಿ ತಾಳ : ಬಿಲಂದಿ 

ಆರು ಪೇಳಿದರೋ ಜೀವಾ 
ನಿನಗಾರು ಪೇಳಿದರೋ                                           ।।ಪ।।

ಆರು ಪೇಳಿದರೋ ಈ ಸೋರುವ ಮನೆಯೊಳು 
ಇರುವುದು ಒಳಿತಲ್ಲಾ ತೆರಳುವದುಚಿತವೇ                  ।।ಅ.ಪ।।

ದುಷ್ಟರಿರುವರೋ 
ಈ ಗೃಹದೊಳು ಕಟ್ಟಿ ಸುಲಿಯುವರೋ 
ಇಟ್ಟಿದ್ದ ಅನ್ನದಿ 
ಕೆಟ್ಟ ಕ್ರಿಮಿಗಳುಂಟು 
ಮುಟ್ಟಿ ಬಳಸುವರಿಲ್ಲ ಹೊಟ್ಟೆ ತುಂಬದೋ ಅಲ್ಲಿ             ।।೧।।

ಛಾಯವು ಇಲ್ಲಾ 
ಈ ಮನೆಯೊಳು 
ದಾಯವೂ ಇಲ್ಲಾ 
ಬಾಯ ಬಿಡಿಸುವರೋ 
ಅನ್ಯಾಯ ಮಾಡುವರೋ 
ಉಪಾಯದಿಂದಲಿ ಬಿಟ್ಟು
ಹಯವದನ ಸೇರೋ                                              ।।೨।।

ತರುಣರಿರುವರೋ 
ಈ ಮನೆಯೊಳು 
ಮರುಳು ಮಾಡುವರೋ 
ಪರಮ ಪುರುಷ ನಮ್ಮಾ ಹನುಮೇಶ ವಿಠಲನ 
ನೆರೆನಂಬಿ ಸ್ಮರಿಸುವ ಸ್ಥಿರ ಪದವನು ಸೇರೋ               ।।೩।।
*****

ಆರು ಪೇಳಿದರೊ ಜೀವಾ ನಿನಗಾರು ಪೇಳಿದರೋ ಪ

ಆರು ಪೇಳಿದರೋ ಈ ಸೋರುವ ಮನೆಯೊಳು
ಇರುವುದು ಒಳಿತಲ್ಲಾ ತೆರಳುವುದುಚಿತನೇ ಅ.ಪ.

ದುಷ್ಟರಿರುವರೋ ಈ ಗ್ರಹದೊಳು
ಕಟ್ಟಿ ಸುಲಿಯುವರೋ
ಇಟ್ಟಿದ್ದ ಅನ್ನದಿ ಕೆಟ್ಟ ಕ್ರಿಮಿಗಳುಂಟು
ಮುಟ್ಟಿ ಬಳಸುವರಿಲ್ಲ ಹೊಟ್ಟೆ ತುಂಬಿದೋ ಅಲ್ಲಿ 1

ಛಾಯಾವೂ ಇಲ್ಲಾ ಈ ಮನೆಯೊಳು
ದಾಯಾವೂ ಇಲ್ಲಾ ಬಾಯ ಬಿಡಿಸುವರೋ
ಅನ್ಯಾಯ ಮಾಡುವರೋ ಉಪಾಯದಿಂದಲಿ ಬಿಟ್ಟು
ಹಯವದನನ ಶೇರೋ 2

ತರುಣರಿರುವರೋ ಈ ಮನೆಯೊಳು
ಮರುಳು ಮಾಡುವರೋ
ಪರುಮ ಹರುಷ ನಮ್ಮ ಹನುಮೇಶ ವಿಠಲನ
ನೆರೆ ನಂಬಿ ಸ್ಮರಿಸುವ ಸ್ಥಿರ ಪದವನು ಸೇರೊ 3
*****