..
ವಧು ವರರ ಯದ್ಧರಿಸೊ ಉದಧಿಶಯನ
ಒದಗಿಸುತಲಾಯುರಾರೋಗ್ಯ ಸುಜ್ಞಾನ ಪ
ಯತಿಪೂಜೆ ಕ್ಷಿತಿದೇವ ತತಿಸೇವೆ
ತಿಥಿತ್ರಯದ ವೃತನೇಮ ಮೊದಲಾದ ಸತ್ಕಕರ್ಮವ
ಮತಿಯಿಂದ ಗೈಯುತಲಿ ಪತಿತಪಾವನ ನಿನ್ನ
ಕಥೆಗಳನು ಕೇಳ್ವದಕೆÉ ರತಿಯಿತ್ತು ಪ್ರತಿದಿನದಿ 1
ಹಿರಿಯರಲಿ ವಿಶ್ವಾಸ ಗುರುಮುಖದಿ ಉಪದೇಶ
ಮರುತ ಸಚ್ಛ್ಯಾಸ್ತ್ರದಔಯಾಸವ
ಪರಮ ಸದ್ಭಕ್ತಿಯಲಿ ನಿರುತದಲ್ಲಿ ಗೈಯುದಕೆ
ಸ್ಥಿರವಾದ ಮನವಿತ್ತು ಮರಿಯದಲೆ ಮಾರಮಣ 2
ಸಾಮಗಾನವಿಲೋಲ ಶಾಮಸುಂದರವಿಠಲ
ಸ್ವಾಮಿಮನ್ನಿಸಿ ಎನ್ನ ಎನ್ನ ವಿಜ್ಞಾಪನೆ
ಯಾಮಯಾಮಕೆ ನಾಮಸುಧೆಯನು ಸವಿಪ
ಈ ಮಹಾಸುಖ ಗರೆದು ಪ್ರೇಮದಿಲಿ ಕೈಪಿಡಿದು 3
***